ADVERTISEMENT

ಬ್ರಾಹ್ಮಣ ಸಮಾಜಕ್ಕೆ ಕಸಬೆ ಕೊಡುಗೆ ಅಪಾರ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಚಾಲಕ ಮುರಳಿಧರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 7:13 IST
Last Updated 31 ಅಕ್ಟೋಬರ್ 2022, 7:13 IST
ರಾಯಚೂರಿನ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಸುಧೀಂದ್ರರಾವ್ ಕಸಬೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ರಾಯಚೂರಿನ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಸುಧೀಂದ್ರರಾವ್ ಕಸಬೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ರಾಯಚೂರು: ‘ಮಾಜಿ ಸಚಿವ ಸುಧೀಂದ್ರರಾವ್ ಕಸಬೆಯವರು ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು. ಬ್ರಾಹ್ಮಣ ಸಮಾಜಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕ ಡಿ.ಕೆ.ಮುರಳಿಧರ್ ತಿಳಿಸಿದರು.

ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದಿಂದ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸುಧೀಂದ್ರರಾವ್‌ ಕಸಬೆ ಅವರುಕಲ್ಮಲಾ ಕ್ಷೇತ್ರದಿಂದ ಆಯ್ಕೆಯಾಗಿ ಗುಂಡುರಾವ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬ್ರಾಹ್ಮಣ ಸಮಾಜದ ಅನೇಕರಿಗೆ ಸಹಾಯ ಸಹಕಾರ ನೀಡಿದ್ದರು ಎಂದು ಹೇಳಿದರು.

ADVERTISEMENT

ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ಬಂಡೂರಾವ್ ಚಾಗಿ, ಕಿಶನರಾವ್ ವ್ಯಕ್ರನಾಳ, ಪ್ರಾಣೇಶ ಮುತಾಲಿಕ್, ಡಾ.ಆನಂದತೀರ್ಥ ಫಡ್ನೀಸ್, ರಾಘವೇಂದ್ರರಾವ್ ಕಲ್ಮಲಾ, ರಾಮರಾವ್ ಕುಲಕರ್ಣಿ ಗಣೇಕಲ್, ಜಯಕುಮಾರ್ ದೇಸಾಯಿ, ಪ್ರಹ್ಲಾದ ವಕೀಲ ಕಲ್ಮಲಾ, ವಸುಧೇಂದ್ರ ಸಿರವಾರ ಹಾಗೂ ವಿನೋದ ಸಾಗರ್ ಮಾತನಾಡಿದರು.

ಸುಧೀರ್, ವೇಣುಗೋಪಾಲ ಇನಾಂದಾರ್, ವಿಷ್ಣುತೀರ್ಥ ಸಿರವಾರ, ವೆಂಕಟೇಶ ಕೋಲಾರ, ತಿರುಮಲರಾವ್, ವಿನೋದ ಕಕ್ಕೇರಿ, ಪ್ರಸನ್ನ ಆಲಂಪಲ್ಲಿ, ವೆಂಕಟೇಶ ನವಲಿ, ತಾರಾನಾಥ ಜೇಗರಕಲ್, ಸುಬ್ಬರಾವ್, ಹನುಮೇಶ, ಪಾಂಡುರಂಗ ಕುರ್ಡಿಕರ್, ಅನಿಲ್ ಕುಮಾರ್ ಹಾಗೂ ಪ್ರಹ್ಲಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.