ಕವಿತಾಳ: ‘ಸಮಾನತೆಯ ಹರಿಕಾರ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಚ್.ಬಸವರಾಜ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಸಂಘದ ಸಂಚಾಲಕ ಬಸಲಿಂಗಪ್ಪ ಮತ್ತು ದಲಿತ ಮುಖಂಡ ಚಂದ್ರು ಮಾತನಾಡಿದರು.
ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ನಾಮಫಲಕಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಖಾಸಿಂಬೀ ಚಾಂದಪಾಷಾ, ಉಪಾಧ್ಯಕ್ಷೆ ಎಲಿಜಾ ಓವಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯಮನಪ್ಪ ದಿನ್ನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಯಲ್ಲಪ್ಪ ಮಾಡಗಿರಿ, ಮಲ್ಲಿಕಾರ್ಜುನ ಗೌಡ, ಮಾಜಿ ಸದಸ್ಯರಾದ ಶರಣಬಸವ ಹಣಗಿ, ಮೌನೇಶ ಹಿರೇಕುರಬರು, ಮುಖಂಡರಾದ ಗಫೂರಸಾಬ್, ಅರಳಪ್ಪ ತುಪ್ಪದೂರು, ತಿಪ್ಪಯ್ಯ ಸ್ವಾಮಿ, ಮೌನೇಶ ದಿನ್ನಿ, ಹನುಮಂತ ಬುಳ್ಳಾಪುರ, ಮೌನೇಶ ಕೊಡ್ಲಿ, ರಮೇಶ ಇರಬಗೇರ, ಮೆಹಿಬೂಬಸಾಬ್, ಹೀರಾಲಾಲಸಿಂಗ್, ಮೆಹಿಬೂಬ್ ಅರಕೇರಿ, ಮಹ್ಮದ್, ಹುಸೇನಪ್ಪ, ರಫಿ ಒಂಟಿಬಂಡಿ, ಸುಧಾಕರ ವಟಗಲ್, ಹುಚ್ಚಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.