ADVERTISEMENT

ಅಪಹರಣ ಪ್ರಕರಣ; 5ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 15:41 IST
Last Updated 12 ಸೆಪ್ಟೆಂಬರ್ 2024, 15:41 IST

ರಾಯಚೂರು: ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಲು ಯತ್ನಿಸಿ ಹಣ ದೋಚಲು ಮುಂದಾಗಿದ್ದ ಐವರು ದುಷ್ಕರ್ಮಿಗಳನ್ನು ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 

ರಾಯಚೂರು ತಾಲ್ಲೂಕಿನ ಶಕ್ತಿನಗರ ಮುಖ್ಯರಸ್ತೆಯಲ್ಲಿ ಆರ್. ನರೇಂದ್ರ ಕುಮಾರ್ ಎನ್ನುವವರು ತಾಯಮ್ಮ ಗುಡಿ ಸಮೀಪದ ಕಾರ್ಖಾನೆಯಿಂದ ಕಾರಿನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಅಪಘಾತದ ನಾಟಕವಾಡಿದ ದುಷ್ಕರ್ಮಿಗಳು ನರೇಂದ್ರಕುಮಾರ ಅವರು ಕಾರಿನಿಂದ ಇಳಿದಾಗ ಅಪಹರಣ ಮಾಡಿದ 5 ಜನ ಆರೋಪಿಗಳು ₹50ಸಾವಿರ ಹಣ ಹಾಗೂ ಮೊಬೈಲ್ ದೋಚಿದ್ದಾರೆ.

ಅಪಹರಣ ಮಾಡಿ ಕುಕನೂರು ರೈಲ್ವೆ ಬ್ರಿಡ್ಜ್ ಬಳಿ ಕರೆದುಕೊಂಡು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ನರೇಂದ್ರಕುಮಾರ ತನ್ನಲ್ಲಿ ಇಷ್ಟೇ ಇದೆ ಹಣ ಎಂದು ಹೇಳಿದಾಗ ದುರ್ಷರ್ಮಿಯೊಬ್ಬ ಚಾಕುವಿನಿಂದ ಬುಜಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ.

ADVERTISEMENT

ಘಟನೆ ಬಳಿಕ ಗಾಯಗೊಂಡ ನರೇಂದ್ರಕುಮಾರ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಗಳಾದ ರಿಯಾಜ್ ಪಾಶ, ಶೇಖ್ ಮುಕ್ತಿಯಾರ್, ಗುರುರಾಜ, ಶೇಕ್ ಅಬ್ದುಲ್ಲಾ ಹಾಗೂ ಗುರುಕುಮಾರನನ್ನು ಬಂಧಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.