ADVERTISEMENT

‘ಫೆ.25ಕ್ಕೆ ಕಾರ್ಮಿಕರ ಸಾಮಾನ್ಯ ಸಭೆ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 5:41 IST
Last Updated 17 ಫೆಬ್ರುವರಿ 2020, 5:41 IST
ಆರ್.ಮಾನಸಯ್ಯ
ಆರ್.ಮಾನಸಯ್ಯ   

ಹಟ್ಟಿಚಿನ್ನದಗಣಿ: ಸ್ಥಳೀಯ ಚಿನ್ನದಗಣಿ ಕಂಪನಿ ಕಾರ್ಮಿಕರ ಹೊಸ ವೇತನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಒಪ್ಪಿಗೆ ಪಡೆಯಲು ಫೆ.25 ರಂದು ಸರ್ವ ಕಾರ್ಮಿಕರ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ಟಿಯುಸಿಐ ಸಂಘಟನೆ ರಾಜ್ಯಧ್ಯಕ್ಷ ಹಾಗೂ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು.

ಪಟ್ಟಣದ ಕಾರ್ಮಿಕ ಸಂಘದ ಅಧಿಕೃತ ಕಚೇರಿಯಾದ ಪೈಭವನದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

2016ರ ಎಪ್ರಿಲ್‌ನಿಂದ ಜಾರಿಯಾಗುವಂತ ಹೊಸ ವೇತನ ಒಪ್ಪಂದಕ್ಕೆ ಈಗಾಗಲೇ ಸರ್ಕಾರ ₹2 ಕೋಟಿ ನೀಡಲು ಮಂಜೂರು ನೀಡಿದೆ. 2016ರ ಮಾರ್ಚ್‌ ತಿಂಗಳಲ್ಲಿ ಜಿ-12 ದರ್ಜೆಯ ಕಾರ್ಮಿಕರಿಗೆ ₹9,250 ಮೂಲ ವೇತನವಿತ್ತು. ಹೊಸ ವೇತನ ಒಪ್ಪಂದ ಪ್ರಕ್ರಿಯೆಯ ಭಾಗವಾಗಿ ಮೂಲ ವೇತನದ ಮೇಲೆ ಶೇ. 25 ರಷ್ಟು ಸಂಬಳ ಹೆಚ್ಚಳ, ಶೇ. 48 ರಷ್ಟು ಐಡಿಎ ಸೇರ್ಪಡೆ, ವಾರ್ಷಿಕ ಶೇ.3 ರಷ್ಟು ಇಂಕ್ರೀಮೆಂಟ್ ಸೇರಿಸಿದರೆ ₹16,480 ಮೂಲ ವೇತನವಾಗಿದೆ. ಇದು ಜಿ-12 ದಜರ್ೆಯಿಂದ ಜಿ-1 ದರ್ಜೆಯವರೆಗೆ ಕಾರ್ಮಿಕರಿಗೆ ಮೂಲ ವೇತನ ಆಗಾಧವಾಗಿ ಹೇರಿಕೆಯಾಗಿದೆ ಎಂದರು.

ADVERTISEMENT

ಕಾರ್ಮಿಕರ ಸಾಮಾನ್ಯ ಸಭೆ ಕರೆದು ಎಲ್ಲ ವಿಷಯಗಳನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆದ ನಂತರ ಬಳ್ಳಾರಿಯ ಆರ್‌ಎಲ್‌ಸಿ(ಕೇಂದ್ರ) ಬಳಿಯಲ್ಲಿ ತ್ರೀಪಕ್ಷಿಯ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಹೇಳಿದರು.

ಬಯ್ಯಾಪುರ ಹೇಳಿಕೆಗೆ ಖಂಡನೆ: ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕುಷ್ಟಗಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಸ್ಪೃಶ್ಯರಿಗೆ ಎಲ್ಲಿವರೆಗೆ ಮೀಸಲಾತಿ ನೀಡಬೇಕೆಂದು ಪ್ರಶ್ನೆ ಮಾಡಿದ್ದು ಖಂಡನೀಯವ. ಈ ಹೇಳಿಕೆ ಕುರಿತು ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಮಾ.21ಕ್ಕೆ ಸ್ಥಳೀಯ ಪಟ್ಟಣದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹಾಗೂ ಮೀಸಲಾತಿಯು ಸಂವಿಧಾನದ ನೀಡಿದ ಮೂಲಭೂತ ಹಕ್ಕಾಗಿದೆ ಎಂದು ಹೋರಾಟ ನಡೆಸಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾರ್ಮಿಕ ಸಂಘದ ಪ್ರಧಾನ ಕಾರ್ಯದಶರ್ಿ ಮಹ್ಮದ ಅಮೀರಅಲಿ, ಮುಖಂಡರಾದ ರೇವಣಸಿದ್ದಪ್ಪ, ಡಿ.ಕೆ.ಲಿಂಗಸುಗೂರು, ನಾಗೇಶ್ವರ್ ರಾವ್, ಗುಡದಪ್ಪ ಭಂಡಾರಿ, ಚನ್ನಪ್ಪ ಹಾಗೂ ಟಿಯುಸಿಐ ಮುಖಂಡ ಚಿನ್ನಪ್ಪ ಕೊಟ್ರಿಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.