ಲಿಂಗಸುಗೂರು: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ಪಟ್ಟಣದ ಅಗ್ನಿ ಶಾಮಕ ಸಿಬ್ಬಂದಿ ಸೋಮವಾರ ರಕ್ಷಣೆ ಮಾಡಿದ್ದಾರೆ.
ಪಟ್ಟಣದ ಗುಡದನಾಳ ಕ್ರಾಸ್ ಬಳಿ ಇರುವ ಸಾಯಿ ಸ್ಕ್ಯಾನಿಂಗ್ ಸೆಂಟರ್, ಆಸ್ಪತ್ರೆಯಲ್ಲಿನ ಲಿಫ್ಟ್‌ನಲ್ಲಿ ಕಟ್ಟಡದ ಎರಡನೇ ಮಹಡಿಯಿಂದ ಕೆಳ ಮಹಡಿಗೆ ಬರುತ್ತಿದ್ದ ಗಂಗಾಧರ (26) ಯುವಕ ಲಿಫ್ಟ್‌ನಲ್ಲಿ ತಾಂತ್ರಿಕ ದೋಷದಿಂದ 3 ತಾಸಿಗೂ ಅಧಿಕ ಕಾಲ ಸಿಲುಕಿಕೊಂಡಿದ್ದರು.
ಲಿಫ್ಟ್‌ನಲ್ಲಿ ಗಂಗಾಧರ ಕಿರುಚಾಡುತ್ತಿರುವುದು ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಗೆ ದೌಡಾಯಿಸಿ ಲಿಫ್ಟ್‌ನಲ್ಲಿದ್ದ ಯುವಕನ್ನು ರಕ್ಷಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಹೊನ್ನಪ್ಪ, ಸಿಬ್ಬಂದಿ ವೀರಯ್ಯ, ಅಲಂಪಾಷಾ, ಅಮರೇಶ ಮೇಟಿ, ಅಮರೇಶ ಠಾಠೋಡ್, ಮಂಜುನಾಥ, ವೀರಭದ್ರಗೌಡ, ವಿನಯಕುಮಾರ, ರಮೇಶ, ಮಲ್ಲೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.