ADVERTISEMENT

ಮಂತ್ರಾಲಯ: ₹ 3.48 ಕೋಟಿ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 16:31 IST
Last Updated 21 ಮಾರ್ಚ್ 2025, 16:31 IST
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ನಗದು ಎಣಿಕೆ ಮಾಡಿದ ಮಠದ ಸಿಬ್ಬಂದಿ
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ನಗದು ಎಣಿಕೆ ಮಾಡಿದ ಮಠದ ಸಿಬ್ಬಂದಿ   

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾರ್ಚ್ ತಿಂಗಳ ಅವಧಿಯಲ್ಲಿ ₹ 3.48 ಕೋಟಿ ನಗದು ಕಾಣಿಕೆ ಬಂದಿದೆ.

ಮಾರ್ಚ್ 21ರಂದು ಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಂಡಿ ತೆರೆದು ಎಣಿಕೆ ಮಾಡಲಾಗಿ ₹ 3,39,35,121 ನಗದು, ₹ 9,34,500 ಮೊತ್ತದ ನಾಣ್ಯಗಳು ಸೇರಿ ಒಟ್ಟು ₹ 3,48,69,621 ನಗದು, 37 ಗ್ರಾಂ ಚಿನ್ನ, 1 ಕೆಜಿ 280 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT