ಮಾನ್ವಿ: ‘ಮೇ 12ರಂದು ಮಧ್ಯಾಹ್ನ 3ಗಂಟೆಗೆ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆ ಹಾಗೂ ವಂದೇ ಮಾತರಂ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಮಂಡಳಿ ಶಿವಶಕ್ತಿ ಆವತಾರ ಸೇವಾ ಸಂಸ್ಥಾನದ ಸ್ಥಳೀಯ ಶಾಖೆಯ ಸಂಚಾಲಕಿ ಬಿ.ಕೆ.ಅಕ್ಕಮ್ಮ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ12ರಂದು ಸಂಜೆ 7.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲ್ಲಿದೆ. 13 ರಂದು ಸಂಜೆ 4ಗಂಟೆಗೆ ಪಟ್ಟಣದ ನಿಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಭೋಲೇನಾಥ ಸತ್ಸಂಗ, ಶಿವ ಯೋಗ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಓಂಕಾರ ಉಚ್ಚಾರಣೆ, ವಂದೇ ಮಾತರಂ ಗೀತೆ ಗಾಯನ ಮತ್ತು ಓಂ ಮಂಡಳಿ ಶಿವಶಕ್ತಿ ಆವತಾರ ಸೇವಾ ಸಂಸ್ಥಾನ ರಾಯಪುರ್ ಛತ್ತಿಸಗಡದ ಮುಖ್ಯಸ್ಥೆ ದೇವಕಿ ಅಮ್ಮನವರು ಹಾಗೂ ವಿವಿಧ ಪೂಜ್ಯರ ನೇತೃತ್ವದಲ್ಲಿ ಶಿವಧ್ಯಾನ ಹಾಗೂ ಶಿವಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕೋರಿದರು.
ಶಿಕಾರಿಪುರ ಶಾಖೆಯ ಸಂಚಾಲಕ ಮಂಜುನಾಥ, ರುದ್ರಪ್ಪ ನಾಯಕ, ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.