ADVERTISEMENT

ಮಸ್ಕಿ | ಅಮೃತ ಯೋಜನೆ ಸ್ಥಗಿತ: ಜನರಿಗೆ ತೊಂದರೆ

ಮುಖ್ಯ ರಸ್ತೆಗೆ ತೆರಳಿ ತರಕಾರಿ, ಕುಡಿಯುವ ನೀರು ತರಬೇಕಾದ ಸ್ಥಿತಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:41 IST
Last Updated 4 ಜುಲೈ 2025, 13:41 IST
ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿ ಅಮೃತ 2.0 ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಅಗೆದ ರಸ್ತೆಯಲ್ಲಿ ಕುಡಿಯುವ ನೀರಿನ ವಾಹನ ಸಿಕ್ಕಿ ಹಾಕಿಕೊಂಡಿರುವುದು
ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿ ಅಮೃತ 2.0 ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಅಗೆದ ರಸ್ತೆಯಲ್ಲಿ ಕುಡಿಯುವ ನೀರಿನ ವಾಹನ ಸಿಕ್ಕಿ ಹಾಕಿಕೊಂಡಿರುವುದು   

ಮಸ್ಕಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹ 42 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಕೈಗೆತ್ತಿಕೊಂಡಿರುವ ಅಮೃತ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಲವು ದಿನಗಳಿಂದ ಸ್ಥಗಿತಗೊಂಡಿದೆ.

ಬಸವೇಶ್ವರ ನಗರದಿಂದ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದವರು ರಸ್ತೆ ನಡುವೆ ಅವೈಜ್ಞಾನಿಕವಾಗಿ ಪೈಪ್‌ಲೈನ್ ಹಾಕಿದ್ದರು. ಸ್ಥಳಕ್ಕೆ ಬಂದ ನೀರು ಸರಬರಾಜು ಮಂಡಳಿ ಅಧಿಕಾರಿಗಳು,‘ರಸ್ತೆ ನಡುವೆ ಹಾಕಿದ್ದ ಪೈಪ್ ತೆಗೆದು ರಸ್ತೆಯ ದಂಡೆಯಲ್ಲಿ ಹಾಕಿ’ ಎಂದು ಸೂಚಿಸಿದ್ದರು.

ಹಾಕಿದ್ದ ಪೈಪ್ ತೆಗೆದ ಗುತ್ತಿಗೆದಾರರು ಸರಿಯಾಗಿ ರಸ್ತೆ ಮುಚ್ಚದ ಕಾರಣ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ‌‌. ರಸ್ತೆ ಸಂಚಾರಕ್ಕೆ ಬಾರದಂತಾಗಿದೆ. ಅಪ್ಪಿ ತಪ್ಪಿ ವಾಹನಗಳು ಬಂದರೆ ಪೈಪ್‌ಲೈನ್‌ಗೆ ತೋಡಲಾಗಿದ್ದ ಗುಂಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ‌. ಇದರಿಂದ ಕುಡಿಯುವ ನೀರು ಸರಬರಾಜು, ತರಕಾರಿ ವಾಹನಗಳು ಬಡಾವಣೆ ಒಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.‌

ADVERTISEMENT

ಮುಖ್ಯ ರಸ್ತೆ ಮೇಲೆ ವಾಹನ ನಿಲ್ಲಿಸುತ್ತಿದ್ದು, ಮಹಿಳೆಯರು ಅಲ್ಲಿಗೇ ಹೋಗಿ ತರಕಾರಿ ಹಾಗೂ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಬಂದಿದೆ.

ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಅಗೆದ ಗುತ್ತಿಗೆದಾರರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕಡೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆ ಸರಿಪಡಿಸಲು ಆಗ್ರಹ ಸಿಕ್ಕಿ ಹಾಕಿಕೊಳ್ಳುತ್ತಿರುವ ವಾಹನಗಳು ಬಡಾವಣೆ ಒಳಗೆ ಬಾರದ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.