ADVERTISEMENT

ಮಸ್ಕಿ | 'ಎರಡನೇ ಶ್ರೀಶೈಲ' ಖ್ಯಾತಿಯ ಮಲ್ಲಿಕಾರ್ಜುನನ ದರ್ಶನಕ್ಕೆ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 4:08 IST
Last Updated 21 ಜುಲೈ 2020, 4:08 IST
ಪ್ರತಿ ವರ್ಷ ಭಕ್ತರಿಂದ ತುಂಬಿರುತ್ತಿದ್ದ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಈ ವರ್ಷ ಕೊರೊನಾ ಲಾಕ್ ಡೌನ್ ನಿಂದ ಭಕ್ತರಿಗೆ ಪ್ರವೇಶ ಇಲ್ಲದ ಕಾರಣ ಬಣಗಡುತ್ತಿರುವುದು
ಪ್ರತಿ ವರ್ಷ ಭಕ್ತರಿಂದ ತುಂಬಿರುತ್ತಿದ್ದ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಈ ವರ್ಷ ಕೊರೊನಾ ಲಾಕ್ ಡೌನ್ ನಿಂದ ಭಕ್ತರಿಗೆ ಪ್ರವೇಶ ಇಲ್ಲದ ಕಾರಣ ಬಣಗಡುತ್ತಿರುವುದು   

ಮಸ್ಕಿ: ‘ಎರಡನೇ ಶ್ರೀಶೈಲ’ ಖ್ಯಾತಿಯ ಪಟ್ಟಣದ ಬೆಟ್ಟದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಶ್ರಾವಣ ಮೊದಲ ಸೋಮವಾರ ಬಂದ ನೂರಾರು ಭಕ್ತರಿಗೆ ಲಾಕ್‌ಡೌನ್ ಬಿಸಿ ತಟ್ಟಿತು.

ಶ್ರಾವಣಮಾಸದ ಒಂದು ತಿಂಗಳು ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಕಾಲ್ನಡೆಗೆಯಲ್ಲಿ ಬೆಟ್ಟ ಹತ್ತಿ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಾರೆ. ಶ್ರಾವಣಮಾಸ ಮುನ್ನದಿನವಾದ ಭೀಮನ ಅಮವಾಸೆಯಾಗಿದ್ದರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಬರುತ್ತಿದ್ದ ಭಕ್ತರಿಗೆ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿತ್ತು.

ಮಲ್ಲಿಕಾರ್ಜುನ ಬೆಟ್ಟ ಹತ್ತುವ ಭ್ರಮರಾಂಬಾ ದೇವಸ್ಥಾನದ ಬಳಿ ಹಾಗೂ ಬೆಟ್ಟಕ್ಕೆ ವಾಹನ ತೆರಳು ಮಾರ್ಗದಲ್ಲಿ ಪೊಲೀಸರು ಕಾವಲು ಹಾಕಲಾಗಿತ್ತು. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳು ಬಂದ ಭಕ್ತರನ್ನು ಪೊಲೀಸರು ವಾಪಾಸು ಕಳಿಸುತ್ತಿದ್ದ ದೃಶ್ಯ ಕಂಡು ಸಾಮಾನ್ಯವಾಗಿತ್ತು.

ADVERTISEMENT

ಪ್ರತಿ ವರ್ಷ ಭಕ್ತರಿಂದ ತುಂಬಿ ತುಳುಕುತ್ತಿದ್ದ ಬೆಟ್ಟದ ಮಲ್ಲಿಕಾರ್ಜುನನ ದೇವಸ್ಥಾನ ಪ್ರವೇಶ ನಿಷೇಧದಿಂದ ಬಿಕೋ ಎನ್ನುತ್ತಿತ್ತು.
ದೇವಸ್ಥಾನದ ಒಳಗಡೆ ಅರ್ಚಕರು ಮಾತ್ರ ಮೂಲ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು
ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.