ADVERTISEMENT

ಮಸ್ಕಿ: 55ನೇ ವರ್ಷದ ಮಹಾದೇವಿ ಪುರಾಣ ಪ್ರವಚನ

ಮಸ್ಕಿ: ಭ್ರಮರಾಂಬ ದೇವಸ್ಥಾನದಲ್ಲಿ ಶರನ್ನವರಾತ್ರಿ ಆರಂಭ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:27 IST
Last Updated 22 ಸೆಪ್ಟೆಂಬರ್ 2025, 6:27 IST
ಮಸ್ಕಿಯ ಭ್ರಮರಾಂಬದೇವಿ
ಮಸ್ಕಿಯ ಭ್ರಮರಾಂಬದೇವಿ   

ಮಸ್ಕಿ: ಶರನ್ನವರಾತ್ರಿ ಅಂಗವಾಗಿ ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ (ಸೆ.22)ದಿಂದ ಅ.7ರವರೆಗೆ ಮಹಾದೇವಿಯ 55ನೇ ವರ್ಷದ ಪುರಾಣ ಪ್ರವಚನ ನಡೆಯಲಿದೆ.

ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ಘಟಸ್ಥಾಪನೆಯೊಂದಿಗೆ ಶರನ್ನವರಾತ್ರಿ ಆಚರಣೆಗೆ ಅಂಕಲಿಮಠದ ವೀರಭದ್ರ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. 22ರಿಂದ 1 ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ರವರೆಗೆ ದೇವಿಪುರಾಣ ನಡೆಯಲಿದೆ.

ಪುರಾಣ ಪ್ರವಚನವನ್ನು ಶರಭಯ್ಯ ಶಾಸ್ತ್ರಿ ಕಂಬಾಳಿಮಠ ನಡೆಸಿಕೊಡಲಿದ್ದಾರೆ. ಮಹೇಶಕುಮಾರ ಹೆರೂರು, ಮಹಾಂತೇಶ ಕಾಳಗಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ADVERTISEMENT

ಅ.1ರಂದು ಪುರಾಣ ಮುಕ್ತಾಯವಾಗಲಿದ್ದು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಅ.2ರಂದು ವಿಜಯದಶಮಿ ಇದ್ದು, ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.

3ರಿಂದ 6 ರವರೆಗೆ ಮೂರು ದಿನ ವಿಶೇಷ ಕಾರ್ಯಕ್ರಮ ಹಾಗೂ ಉಪನ್ಯಾಸ ನಡೆಯಲಿದೆ. 7 ರಂದು ಶರನ್ನವರಾತ್ರಿ ಮುಕ್ತಾಯದ ಅಂಗವಾಗಿ ಬೆಳಿಗ್ಗೆ ಗಂಗಾಸ್ಥಳದಿಂದ ಜಂಬೂ ಸವಾರಿ ಮೆರವಣಿಗೆಯು ಸಾವಿರ ಪೂರ್ಣಕುಂಭ, ಕಳಸ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ನಂತರ ಭ್ರಮರಾಂಬ ದೇವಿಗೆ ಅಭಿಷೇಕ, ಮಹಾಪ್ರಸಾದ ನಡೆಯಲಿದೆ. ಸಂಜೆ 5 ಗಂಟೆಗೆ ಭ್ರಮರಾಂಬ ದೇವಿಯ ರಥವನ್ನು ಮಹಿಳೆಯರು ಎಳೆಯುವ ಮೂಲಕ ಶರನ್ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.