ADVERTISEMENT

ರಾಯಚೂರು: ಮಹಾನಗರ ಪಾಲಿಕೆಯಿಂದ ಬಿ. ಖಾತಾ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:48 IST
Last Updated 3 ಮೇ 2025, 13:48 IST
<div class="paragraphs"><p>ರಾಯಚೂರಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಮೇಯರ್‌ ನರಸಮ್ಮ ನರಸಿಂಹಲು ಅವರು ವ್ಯಕ್ತಿಯೊಬ್ಬರಿಗೆ ಬಿ. ಖಾತಾ ವಿತರಿಸಿದರು</p></div>

ರಾಯಚೂರಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಮೇಯರ್‌ ನರಸಮ್ಮ ನರಸಿಂಹಲು ಅವರು ವ್ಯಕ್ತಿಯೊಬ್ಬರಿಗೆ ಬಿ. ಖಾತಾ ವಿತರಿಸಿದರು

   

ರಾಯಚೂರು: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಮೇಯರ್‌ ನರಸಮ್ಮ ನರಸಿಂಹಲು ಅವರು ಬಿ. ಖಾತಾ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತ ಜುಬಿನ ಮೊಹಾಪಾತ್ರ ಮಾತನಾಡಿ, ‘ನಗರಸಭೆ ಸದಸ್ಯರು ರಾಜ್ಯ ಸರ್ಕಾರದ ಬಿ-ಖಾತಾ ಅಭಿಯಾನ ಸದುಪಯೋಗ ಪಡೆಯುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದರು ಹೇಳಿದರು.

ADVERTISEMENT

‘ಬರುವ ದಿನಗಳಲ್ಲಿ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಖಾತಾಗಳನ್ನು ವಿತರಿಸಲಾಗುವುದು. ಯಾವುದೇ ಸಮಸ್ಯೆ ಇದ್ದರೆ ಸದಸ್ಯರು ನೇರವಾಗಿ ಆಯುಕ್ತರು, ವಲಯ ಆಯುಕ್ತರು ಮತ್ತು ಕಂದಾಯ ಅಧಿಕಾರಿಯ ಗಮನಕ್ಕೆ ತರಬಹುದು. ಸಹಾಯವಾಣಿ ಸಂಖ್ಯೆ: 08532200551, 9448195967 ಕರೆ ಮಾಡಬಹುದು’ ಎಂದು ತಿಳಿಸಿದರು.

ಉಪ ಮೇಯರ್‌ ಸಾಜೀದ್ ಸಮೀರ್, ಪಾಲಿಕೆ ಸದಸ್ಯರಾದ ಎನ್.ನಾಗರಾಜ, ವಿ.ನಾಗರಾಜ, ಮುಖಂಡರಾದ ಬಿ.ತಿಮ್ಮಾರೆಡ್ಡಿ, ಶಂಕರಪ್ಪ, ವಲಯ ಆಯುಕ್ತ ಸಲೀಂ ಪಾಷಾ, ಉಭಯ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.