ADVERTISEMENT

ಶಾಸಕ ಡಾ.ಶಿವರಾಜ ಪಾಟೀಲಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:03 IST
Last Updated 7 ಆಗಸ್ಟ್ 2020, 12:03 IST
ಡಾ.ಶಿವರಾಜ ಪಾಟೀಲ
ಡಾ.ಶಿವರಾಜ ಪಾಟೀಲ   

ರಾಯಚೂರು: ಕೆಲವು ದಿನಗಳಿಂದ ಹೋಂ ಕ್ವಾರಂಟೈನ್‌ ಆಗಿದ್ದ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರಿಗೆ ಕೋವಿಡ್‌ ದೃಢವಾಗಿದೆ.

ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚೆರಿಕೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗುವುದಕ್ಕೆ ತೆರಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಎರಡನೇ ಸಲ ಪರೀಕ್ಷೆ ಮಾಡಿಸಿದಾಗ ಕೋವಿಡ್‌ ದೃಢವಾಗಿದ್ದು, ವಾರದ ಹಿಂದೆ ಪರೀಕ್ಷೆ ಮಾಡಿಸಿದ್ದಾಗ ನೆಗೆಟಿವ್‌ ವರದಿ ಇತ್ತು. ಪ್ರಥಮ ಸಂಪರ್ಕ, ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT