ಮುದಗಲ್: ಸಮೀಪದ ಪಿಕಳಿಹಾಳ ಗ್ರಾಮದಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ ಬೆಳ್ಳಿ, ಬಂಗಾರ ವಶಕ್ಕೆ ಪಡೆದಿದ್ದಾರೆ.
ಪಿಕಳಿಹಾಳ ಗ್ರಾಮದಲ್ಲಿ ಅ.4ರಂದು ರಾತ್ರಿ ಎರಡು ಕಡೆ ಕಳ್ಳತನ ಜರುಗಿತ್ತು. ಪ್ರಕರಣ ದಾಖಲಿಸಿಕೊಂಡು ಪಿಎಸ್‌ಐ ವೆಂಕಟೇಶ ಮಾಡಗೇರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಪಿಕಳಿಹಾಳ ಗ್ರಾಮದ ಮಲ್ಲೇಶ ಅಮಾತೆಪ್ಪ ಅಡವಿಭಾವಿ (26) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತನಿಂದ 30 ಗ್ರಾಂ ಬಂಗಾರ, 60 ಗ್ರಾಂ ಬೆಳ್ಳಿ ಚೈನ್ ಸೇರಿ ₹1.47 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.