ಮುದಗಲ್: ಏ.14 ರಂದು ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಲಾಗುತ್ತದೆ’ ಎಂದು ಜೈ ಭೀಮ್ ಯುವ ಘರ್ಜನೆ ಸೇನೆಯ ಮುಖಂಡ ಪೂರ್ಣಾನಂದ ಚಲವಾದಿ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಧ್ಧಾರ್ಥ ನಗರದಿಂದ ಮೆರವಣಿಗೆ ಆರಂಭವಾಗಲಿದ್ದು ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಸಂಜೆ ಸಿದ್ಧಾರ್ಥ ನಗರದ ಮೈದಾನದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ನಾಗಲಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಶರಣಬಸವ ವ್ಯಾಕರನಾಳ ಮೂರ್ತಿಯ ಮೆರವಣಿಗೆ ಚಾಲನೆ ನೀಡುವರು‘ ಎಂದು ಹೇಳಿದರು.
ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ರಂಗನಾಥ ಬಂಕದಮನಿ, ರವಿ ಕಟ್ಟಿಮನಿ, ಗಣೇಶ ಚಲವಾದಿ, ಮಂಜುನಾಥ ತೆಳಗಲಮನಿ, ರವಿಚಂದ್ರ ಚಲವಾದಿ, ಗೌತಮ ಚಲವಾದಿ, ವಿಯನಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.