ADVERTISEMENT

ದೇವದುರ್ಗ: ಪುರಸಭೆಯಿಂದ ರಾಜಕಾಲುವೆ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 13:57 IST
Last Updated 25 ಜೂನ್ 2025, 13:57 IST
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ಜೆಸಿಬಿ ಮೂಲಕ ಚರಂಡಿ ಸ್ವಚ್ಛಗೊಳಿಸುತ್ತಿರುವುದು
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ಜೆಸಿಬಿ ಮೂಲಕ ಚರಂಡಿ ಸ್ವಚ್ಛಗೊಳಿಸುತ್ತಿರುವುದು   

ದೇವದುರ್ಗ: ಪಟ್ಟಣದ ಎಪಿಎಂಸಿ ಹತ್ತಿರ ಸೇರಿ ವಿವಿಧ ವಾರ್ಡ್‌ಗಳಲ್ಲಿನ ಚರಂಡಿ ಮತ್ತು ಬಸ್ ನಿಲ್ದಾಣದ ಬಳಿ ರಾಜಕಾಲುವೆ ಸ್ವಚ್ಚತೆಗೆ ಪುರಸಭೆ ಮುಂದಾಗಿದೆ.

ಪುರಸಭೆ ಆಡಳಿತವು ಪಟ್ಟಣದ ಹಳೆ ಬಸ್ ನಿಲ್ದಾಣ, ಹಜರತ್ ಜೈಹಿರುದ್ದಿನ್ ಪಾಷಾ ಸರ್ಕಲ್, ಎಪಿಎಂಸಿ ಏರಿಯಾ, ಅಂಬೇಡ್ಕರ್ ಚೌಕ್‌ ಮತ್ತು ಹೊಸ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ 23 ವಾರ್ಡ್ ವ್ಯಾಪ್ತಿಯಲ್ಲಿ ಬರುವ ದೊಡ್ಡ ಚರಂಡಿ ಮತ್ತು ರಾಜಕಾಲುವೆಗಳನ್ನು ಮಿನಿ ಜೆಸಿಬಿ, ಜೆಸಿಬಿ ಮೂಲಕ ಸ್ವಚ್ಛತೆ ಮಾಡುತ್ತಿದೆ.

ಹಲವಡೆ ಬೀದಿ ಬದಿ ವ್ಯಾಪಾರಸ್ಥರು ಚರಂಡಿ ಮೇಲೆ ಡಬ್ಬಾ ಅಂಗಡಿಗಳು ಇಟ್ಟಿರುವುದರಿಂದ ಚರಂಡಿಗಳ ಸ್ವಚ್ಛತೆಗೆ ಅಡೆತಡೆಯಾಗಿತ್ತು. ಇನ್ನೂ ಕೆಲ ಅಂಗಡಿ ಮಾಲೀಕರು ಚರಂಡಿಗೆ ಮಣ್ಣು ಸುರಿದು ವಾಹನ ಓಡಾಟಕ್ಕೆ ದಾರಿ ಮಾಡಿದ ಪರಿಣಾಮ ಚರಂಡಿ ಜಾಮ್ ಆಗಿ ಎಪಿಎಂಸಿ ಹತ್ತಿರ ರಸ್ತೆ ಮೇಲೆ ಹರಿಯುತ್ತಿತ್ತು. ಜೆಸಿಬಿಯ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಕೆ, ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.