ADVERTISEMENT

ಪುಣ್ಯಸ್ಮರಣೆ: ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 2:35 IST
Last Updated 27 ಸೆಪ್ಟೆಂಬರ್ 2021, 2:35 IST
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ ಅವರ ಪುಣ್ಯ ಸ್ಮರಣಾರ್ಥ 41ನೇ ವರ್ಷದ ಸಂಗೀತ ಸಮ್ಮೇಳನ ಜರುಗಿತು
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ ಅವರ ಪುಣ್ಯ ಸ್ಮರಣಾರ್ಥ 41ನೇ ವರ್ಷದ ಸಂಗೀತ ಸಮ್ಮೇಳನ ಜರುಗಿತು   

ರಾಯಚೂರು: ‘ ಪಂಚಾಕ್ಷರಿ ಗವಾಯಿ ಅವರು ಅಜ್ಞಾನ, ಅಂಧಕಾರ, ಮೌಢ್ಯದ ಬಗ್ಗೆ ಜಾಗೃತಿ ಮೂಡಿದ್ದರು‘ ಎಂದು ಗದಗ ಜಿಲ್ಲೆಯ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಪಂಚಾಕ್ಷರಿ ಗವಾಯಿ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪಂಚಾಕ್ಷರಿ ಗವಾಯಿ ಅವರ ಪುಣ್ಯ ಸ್ಮರಣೆ ಹಾಗೂ 41ನೇ ವರ್ಷದ ಸಂಗೀತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪುಟ್ಟರಾಜು ಗವಾಯಿ ಅವರ ನೆನಪಿನಲ್ಲಿ ಸಂಸ್ಥೆಯಿಂದ ಸಂಗೀತ ಸೇವೆ ನಡೆಸುತ್ತಿದ್ದು ಶ್ಲಾಘನೀಯ. ಕಲಾವಿದರಿಗೆ ನೆರವು ಅಗತ್ಯವಾಗಿದೆ. ಕಲೆ ಹಾಗೂ ಕಲಾವಿದರನ್ನು ಬೆಳೆಸುವ ಕೈಗಳು ಹೆಚ್ಚಾಗಬೇಕು ಎಂದರು.

ADVERTISEMENT

ಸಂಸದ ರಾಜಾ ಅಮರೇಶ್ವರ ಮಾತನಾಡಿ, ಸಂಗೀತ ಹಾಗೂ ಶಿಕ್ಷಣ ಸೇವೆ ಮುಖ್ಯವಾದುದು. ಎರಡು ಕ್ಷೇತ್ರಗಳಿಗೆ ಅಗತ್ಯ ಸಹಕಾರ ಸಿಗುವಂತಾಗಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಕರ್ಯವನ್ನು ಒದಗಿ ಸಲು ಪ್ರಯತ್ನಿಸಲಾಗುವುದು ಎಂದರು.

ಶಾಸಕ ಬಸನಗೌಡ ದದ್ದಲ, ಮುಖಂಡ ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿದರು.

ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ, ಗಬ್ಬೂರಿನ ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ವನಜಾಕ್ಷಿ ಎನ್., ಪಂಚಾಕ್ಷರಿ ಗವಾಯಿ ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷ ನರಸಿಂಹಲು ವಡವಾಟಿ, ಅಧ್ಯಕ್ಷ ಸುಗುರೇಶ ಅಸ್ಕಿಹಾಳ, ಉಪಾಧ್ಯಕ್ಷ ಸೂಗೂರಯ್ಯಸ್ವಾಮಿ ಹೊಸೂರು, ಸುಧಾಕರ ಅಸ್ಕಿಹಾಳ, ಇಬ್ರಾಹೀಂ, ವೆಂಕಟೇಶ ಆಲ್ಕೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.