
ದೇವದುರ್ಗ: ‘ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಸ್ಥಾನಮಾನ ನೀಡಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರತಿ ಹೆಣ್ಣು ಮಗುವಿಗೆ ಅಧಿಕಾರ ನೀಡಿ, ಶಿಕ್ಷಣ ನೀಡಿ ಸಂಭ್ರಮಿಸಬೇಕು. ಹೆಣ್ಣು ಮಕ್ಕಳಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ಸೃಷ್ಟಿಸುವ ಕುರಿತು ಜಾಗೃತಿ ಮೂಡಿಸಬೇಕು. ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಶಕ್ತಿ ತುಂಬಬೇಕು’ ಎಂದರು.
‘ಪುರುಷ ಸಮಾಜಕ್ಕೆ ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿಬೇಕು. ಆದರೆ, ಮಗಳಾಗಿ ಏಕೆ ಬೇಡ? ಹೆಣ್ಣನ್ನು ಗಂಡು ಮಕ್ಕಳಂತೆ ಸಮಾನವಾಗಿ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಸರಿಯಾಗಿ ಓದಿಸಿ, ಉಳಿಸಿ ಅವರನ್ನು ಬೆಳೆಸಬೇಕು. ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ತಾತ್ಸಾರದ ಮನೋಭಾವ ಬೇಡ. ಹೆಣ್ಣನ್ನು ಗೌರವಿಸಬೇಕು. ಎಲ್ಲ ರೀತಿಯಲ್ಲಿಯೂ ಬೆಂಬಲಿಸಬೇಕು. ಹೆಣ್ಣು ಭ್ರೂಣ ಹತ್ಯೆ ಮಾಡಿದ ವೈದ್ಯರು ಹಾಗೂ ಗರ್ಭಿಣಿಯ ಕುಟುಂಬಸ್ಥರಿಗೆ ಕಠಿಣ ಕಾರಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ ತಡೆಯಬೇಕು’ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ, ಮಕ್ಕಳ ತಜ್ಞ ಡಾ.ಶಿವಕುಮಾರ, ಡಾ.ಗಂಗಾಧರ, ಡಾ.ಶ್ರುತಿ ವಾರದ, ಡಾ.ನಿರ್ಮಲಾ ದೇವಿ, ಡಾ.ನಾಗರಾಜ, ಡಾ.ಅಫ್ಸಾನಾ, ಡಾ.ಸಂಗಮ್ಮ, ಡಾ.ಆನಂದ, ಡಾ.ಮಹೇಂದ್ರ, ರಾಜು ಅಬೆಲ್, ಶಿವಪ್ಪ, ಗೀತಮ್ಮ, ತಿಮ್ಮಪ್ಪ, ಶ್ರೀನಿವಾಸ, ಚನ್ನಬಸಯ್ಯ, ಸೋಮಪ್ಪ, ಚಂದ್ರಾಮಪ್ಪ, ರಾಘವೇಂದ್ರ ಗೌಡ, ಮಂಜುನಾಥ, ಕರೆಮ್ಮ, ಮೋನಮ್ಮ, ರಂಗಮ್ಮ, ಸುಲೋಚನಾ, ಲಕ್ಷ್ಮೀ, ರವಿ, ಪ್ರಭುರಾಜ, ಶರಣಬಸವ, ಸಂತೋಷ, ಇಮಾಮ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.