ADVERTISEMENT

ಮುದಗಲ್: ನಾಲ್ಕು ತಿಂಗಳಲ್ಲಿ ನಾಲ್ವರು ಪಿಡಿಒಗಳ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:41 IST
Last Updated 21 ಏಪ್ರಿಲ್ 2025, 15:41 IST

ಮುದಗಲ್: ಸಮೀಪದ ನಾಗಲಾಪುರ ಗ್ರಾಮ ಪಂಚಾಯಿತಿಗೆ ನಾಲ್ಕು ತಿಂಗಳಲ್ಲಿ ನಾಲ್ವರು ಪಿಡಿಒಗಳನ್ನು ಬದಲಾವಣೆ ಮಾಡಲಾಗಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಘಪ್ಪ ರಾಠೋಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ತಾಲ್ಲೂಕು ಪಂಚಾಯಿತಿ ಇಒ ಉಮೇಶ ಅವರು ರಾಜಕಾರಣಿಗಳ ಒತ್ತಡಕ್ಕೆ ಮಣಿದು 4 ತಿಂಗಳಲ್ಲಿ ನಾಲ್ವರು ಗ್ರೇಡ್–2 ಕಾರ್ಯದರ್ಶಿಗಳಿಗೆ ಪಿಡಿಒ ಪ್ರಭಾರ ನೀಡಿದ್ದಾರೆ. ಅವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿಲ್ಲ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ, ಕುಡಿಯುವ ನೀರು, ವಸತಿ ಸೇರಿದಂತೆ ಇತರೆ ಯೋಜನೆಗಳ ಜಾರಿಗೆ ತರಲು ತೀವ್ರ ತೊಂದರೆಯಾಗಿದೆ’ ಎಂದರು.

‘ಈ ಹಿಂದೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಪಿಡಿಒ ಜ್ಯೋತಿಬಾಯಿ ಅವರನ್ನ ಪುನಃ ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

ಮಾನಪ್ಪ, ವಿಜಯಕುಮಾರ, ಶಿವನಗೌಡ, ಸಿದ್ದಪ್ಪ, ಭೀಮನಗೌಡ, ಹನಮಂತ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.