ಮುದಗಲ್: ಪುರಸಭೆಗೆ ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆಯ ನೂತನ ಕಾರ್ಯಪಾಲಕ ಎಂಜಿನಿಯರ್ ಶರಣಪ್ಪ ನಾಯಕ ಮತ್ತು ಎಇಇ ಶ್ರೀದೇವಿ. ಎನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಶರಣಪ್ಪ ನಾಯಕ ಮಾತನಾಡಿ,‘ನಾನು ಅಧಿಕಾರ ಸ್ವೀಕರಿಸಿದ ಮೇಲೆ ಜಿಲ್ಲೆಯ ಪ್ರತಿ ಪ.ಪಂ, ಪುರಸಭೆಗಳಿಗೆ ಭೇಟಿ ನೀಡುತ್ತಿದ್ದೇವೆ. ತಿಂಗಳಿಗೊಮ್ಮೆ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿ ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಪುರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ನಗರಾಭಿವೃದ್ಧಿ ಇಇ ಶರಣಪ್ಪ ನಾಯಕ ಅವರನ್ನು ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಗುತ್ತಿಗೆದಾರರು ಮತ್ತು ಸಿಬ್ಬಂದಿ ಗೌರವಿಸಿದರು. ಮುಖಂಡರಾದ ಸೈಯದ್ ಸಾಬ ಹಳೇಪೇಟೆ, ತಮ್ಮಣ್ಣ ಗುತ್ತೇದಾರ, ಚಂದಾವಲಿಸಾಬ ಜಂಗ್ಲಿ, ಫಯಾಜ್ ಹುಸೇನ್, ಪುರಸಭೆ ಜೆಇ ಮಹೇಂದ್ರಕುಮಾರ, ಪವನಕುಮಾರ, ಸಂಪತ್ ಹಾಗೂ ಪ್ರಶಾಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.