ADVERTISEMENT

ಆನ್‍ಲೈನ್‌ನಲ್ಲಿ ವೈದ್ಯಕೀಯ ಶಿಕ್ಷಣ

ಕೆಪಿಎಸ್‍ವಿಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಕ್ರಮಕ್ಕೆ ಮೆಚ್ಚುಗೆ

ಬಸವರಾಜ ಬೋಗಾವತಿ
Published 2 ಜೂನ್ 2020, 16:47 IST
Last Updated 2 ಜೂನ್ 2020, 16:47 IST
ಆನ್‌ಲೈನ್ ಬೋಧನೆ
ಆನ್‌ಲೈನ್ ಬೋಧನೆ   

ಮಾನ್ವಿ: ಲಾಕ್‌ಡೌನ್ ಕಾರಣ ಮಾನ್ವಿ ಪಟ್ಟಣದ ಕೆಪಿಎಸ್‍ವಿಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಆನ್‌ಲೈನ್ ಮೂಲಕ ಬೋಧನೆ ಮಾಡಲಾಗುತ್ತಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೂಚನೆ ಮೇರೆಗೆ ಏಪ್ರಿಲ್ 1ರಿಂದ ಈ ವಿನೂತನ ಬೋಧನಾ ಪದ್ಧತಿ ಅನುಸರಿಸಲಾಗುತ್ತಿದೆ.

ಝೂಮ್ ಆ್ಯಪ್ ಮತ್ತು ಸಿಸ್ಕೋ ವೆಬೆಕ್ಸ್ ಬಳಸಿಕೊಂಡು ಕಾಲೇಜಿನ ಪ್ರಾಧ್ಯಾಪಕರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಏಕಕಾಲಕ್ಕೆ ಪರಸ್ಪರ ಸಂವಹನ ನಡೆಸುವ ಮೂಲಕ ತರಗತಿಗಳನ್ನು ನಿರ್ವಹಿಸಲಾಗುತ್ತಿದೆ.

ADVERTISEMENT

ಪ್ರಾಧ್ಯಾಪಕರು, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನ್‍ಲೈನ್ ಮೂಲಕ ಬೋಧನೆ ಮತ್ತು ಕಲಿಕೆ ಹೊಸ ಅನುಭವ ಮೂಡಿಸಿವೆ. ಲಾಕ್‌ಡೌನ್ ಜಾರಿಯಾದ ನಂತರ ಸ್ವಂತ ಊರುಗಳಿಗೆ ಹಿಂದಿರುಗಿದ್ದ ಕಾಲೇಜಿನ ಹಲವು ಪ್ರಾಧ್ಯಾಪಕರು ತಾವಿರುವ ಸ್ಥಳದಿಂದಲೇ ಆನ್‌ಲೈನ್ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಎಎಂಎಸ್ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿ ದಿನ ತಲಾ 3 ತಾಸು ಬೋಧನೆ ಮಾಡಲಾಗುತ್ತಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ದೂರದ ನೇಪಾಳ, ಅಂಡಮಾನ್ ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿ ರಾಜ್ಯದ ಇತರ ಸ್ಥಳಗಳ ಹಲವು ವಿದ್ಯಾರ್ಥಿಗಳಿಗೆ ಆನ್‍ಲೈನ್ ಬೋಧನೆಯಿಂದ ಅನುಕೂಲವಾಗಿದೆ.

‘ ಪಠ್ಯಕ್ರಮ ಮುಗಿಸಲು ಆನ್‌ಲೈನ್ ಮೂಲಕ ಬೋಧನೆ ಅನಿವಾರ್ಯವಾಗಿದೆ. ಪ್ರತಿ ದಿನ ನಿಗದಿತ ಸಮಯಕ್ಕೆ ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ.ಎಚ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.