ADVERTISEMENT

ಮತಯಂತ್ರ ನೆಲಕ್ಕೆಸೆದ ವ್ಯಕ್ತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 14:10 IST
Last Updated 23 ಏಪ್ರಿಲ್ 2019, 14:10 IST
ಆರೋ‍ಪಿ ಗುರುನಾಥ
ಆರೋ‍ಪಿ ಗುರುನಾಥ   

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕರಿಬಾವಿ ಗ್ರಾಮದ ಮತಗಟ್ಟೆ ಸಂಖ್ಯೆ 31 ರಲ್ಲಿ ಬ್ಯಾಲೆಟ್‌ ಕಂಟ್ರೊಲ್‌ ಯುನಿಟ್‌ (ಬಿಸಿಯು) ನೆಲಕ್ಕೆಸೆದ ಪ್ರಸಂಗ ನಡೆದಿದೆ. ಯಂತ್ರ ನೆಲಕ್ಕೆಸೆದ ಕಾಂಗ್ರೆಸ್‌ ಏಜೆಂಟ್‌ ಗುರುನಾಥನನ್ನು ಪೊಲೀಸರು ಕೂಡಲೇ ಬಂಧಿಸಿದರು.

ಬಿಜೆಪಿ ಪರ ಹಾಕು ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಕ್ಕೆ ಕೋಪಗೊಂಡು ಮತಯಂತ್ರ ನೆಲಕ್ಕೆಸೆದಿದ್ದಾನೆ. ಮತಗಟ್ಟೆ ಅಧಿಕಾರಿಗಳು ಹೊಸ ಮತಯಂತ್ರವನ್ನು ಅಳವಡಿಸಿ, ಇನ್ನುಳಿದ ಮತದಾರರು ಮತದಾನ ಮಾಡಲು ಅವಕಾಶ ಕಲ್ಪಿಸಿದರು.

ಪ್ರಕರಣ ದಾಖಲು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಹಟ್ಟಿ ಪಟ್ಟಣದ ಮತಗಟ್ಟೆಯಲ್ಲಿ ಮತದಾನ ಮಾಡುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಪೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಕ್ಕಾಗಿ ಅಮರೇಶ ಹಿರೇಮಠ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.