ಮಾನ್ವಿ: ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಸದಸ್ಯ ಖಾಲೀದ್ ಖಾದ್ರಿ ಹಾಗೂ ಮತ್ತಿತರರು ಪಟ್ಟಣದಲ್ಲಿ
ಆರ್ಯವೈಶ್ಯ ಸಮಾಜ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರು ಮತ್ತು ವಿವಿಧ ಸಮಾಜದ ಅಧ್ಯಕ್ಷರು ಹಾಗೂ ವಿವಿಧ ಪಕ್ಷದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.
ಜೂನ್ 21ರಂದು ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಎನ್.ಎಸ್.ಬೋಸರಾಜು ಅವರ ಅಭಿನಂದನಾ ಹಾಗೂ ‘ಚೈತನ್ಯ ಸಾಗರ' ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲು ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ರಾಜಾ ಸುಭಾಷ್ ಚಂದ್ರ ನಾಯಕ, ಚಾಂದ್ ಪಾಷಾ ಗುತ್ತೇದಾರ, ಹಿದಾಯತ ನಾಯ್ಕ್, ಸೂರ್ಯನಾರಾಯಣ ಯಾದವ, ರಸೂಲ್ ಖುರೇಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.