ADVERTISEMENT

ಆದೇಶವಿಲ್ಲದೆ ಅತಿಥಿ ಉಪನ್ಯಾಸಕರ ನೇಮಕ!

ನೇಮಕಾತಿ ರದ್ದು: ಹೊಸದಾಗಿ ಅರ್ಜಿ ಆಹ್ವಾನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:08 IST
Last Updated 27 ಜುಲೈ 2022, 4:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇವದುರ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇಲಾಖೆಯ ಆದೇಶವಿಲ್ಲದೆ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದ್ದಾರೆ.

ಜುಲೈ 12ರಂದು ಉಪ ನಿರ್ದೇಶಕ ರಾಜಶೇಖರ ಅವರು ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದರು. ಆದೇಶದಲ್ಲಿ ಅರ್ಜಿ ಸಲ್ಲಿಸಲು ಜು.14 ಕೊನೆಯ ದಿನ ಎಂದು ತಿಳಿಸಿದ್ದರು. ಅರ್ಜಿ ಸಲ್ಲಿಸಲು ಕೇವಲ ಎರಡು ದಿನ ಅವಕಾಶ ನೀಡಿದ ಕಾರಣ ಕೆಲ ಹಿರಿಯ ಅತಿಥಿ ಉಪನ್ಯಾಸಕರು ಜಂಟಿ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ.

ತಾಲ್ಲೂಕಿನ ಕೆಲ ಪದವಿ ಪೂರ್ವ ಕಾಲೇಜುಗಳ ಪ್ರಭಾರ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು ಸ್ವ ಇಚ್ಚೆಯಿಂದ ಅರ್ಜಿ ಆಹ್ವಾನಿಸಿ ತಮಗೆ ಬೇಕಾದವರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಅವಕಾಶ ವಂಚಿತ ಅತಿಥಿ ಉಪನ್ಯಾಸಕರು ಜಂಟಿ ನಿರ್ದೇಶಕ ಮಂಜುನಾಥ ಪ್ರಸನ್ನ ಅವರಿಗೆ ಮಾಹಿತಿ ನೀಡಿದ್ದಾರೆ.ಜಂಟಿ ನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ,‘ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದಿಂದ ಅನುದಾನ ಹಾಗೂ ಅನುಮತಿ ದೊರತಿದೆ. ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳದಕಾರಣ ಅತಿಥಿ ಉಪನ್ಯಾಸಕರ ನೇಮಕಕ್ಕೆ ಇಲಾಖೆ ಆದೇಶ ಹೊರಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.