ADVERTISEMENT

ಪಿಯು: ಸಂತೋಷ ಗುಡಿ, ಬಿ.ವನಿತಾ, ಲಕ್ಷ್ಮೀ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:57 IST
Last Updated 16 ಏಪ್ರಿಲ್ 2019, 14:57 IST
ಸಂತೋಷ ಗುಡಿ
ಸಂತೋಷ ಗುಡಿ   

ರಾಯಚೂರು: ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಿಂಧನೂರಿನ ಜ್ಞಾನಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಂತೋಷ ಗುಡಿ 581 (96.83) ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಸಾಯನ ಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ತಲಾ 100 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಎಸ್‌ಆರ್‌ಪಿಎಸ್‌ ಕಾಲೇಜಿನ ಬಿ.ವನಿತಾ 580 (96.66) ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಅಕೌಂಟೆನ್ಸಿ ಹಾಗೂ ಬೇಸಿಕ್ ಮ್ಯಾಥ್ಸ್‌ನಲ್ಲಿ ತಲಾ 100 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಸಿಂಧನೂರಿನ ಸಂಕೇತ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ 578 (96.33) ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ADVERTISEMENT

ಶೂನ್ಯ ಫಲಿತಾಂಶ:

ರಾಯಚೂರಿನ ಅಫ್ತಾಬ್‌ ಪಿಯು ಕಾಲೇಜು, ಫೆಡರಲ್ ಪಿಯು ಕಾಲೇಜು, ಗಾಂಧಿ ಮೆಮೋರಿಯಲ್ ಕಾಲೇಜು, ಸಿಂಧನೂರು ತಾಲ್ಲೂಕಿನ ಗೋನವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮ ಶಾರದ ಪಿಯು ಕಾಲೇಜು ಶೂನ್ಯ ಫಲಿತಾಂಶ ಪಡೆದಿವೆ. ಜಿಲ್ಲೆಯಲ್ಲಿ ಒಂದೂ ಕಾಲೇಜು ಶೇ 100 ರಷ್ಟು ಫಲಿತಾಂಶ ಪಡೆದ ಸಾಧನೆ ಮಾಡಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.