ADVERTISEMENT

ಪಂಪ್‌ಸೆಟ್ ವಿತರಣೆ: ಗಂಗಾಕಲ್ಯಾಣದಿಂದ ರೈತರಿಗೆ ಆರ್ಥಿಕ ಲಾಭ

ಶಾಸಕ ಶಿವನಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 4:22 IST
Last Updated 2 ಜೂನ್ 2022, 4:22 IST
ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶಾಸಕ ಶಿವನಗೌಡ ನಾಯಕ ಅವರು ಪಂಪ್‌ಸೆಟ್ ವಿತರಿಸಿದರು
ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶಾಸಕ ಶಿವನಗೌಡ ನಾಯಕ ಅವರು ಪಂಪ್‌ಸೆಟ್ ವಿತರಿಸಿದರು   

ದೇವದುರ್ಗ: ‘ಗಂಗಾಕಲ್ಯಾಣ ಯೋಜನೆಯಿಂದ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಿದೆ. ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಈ ಯೋಜನೆ ಸಹಕಾರಿಯಾಗುತ್ತದೆ’ ಎಂದು ಶಾಸಕ ಕೆ.ಶಿವನಗೌಡ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಪಂಪ್‌ಸೆಟ್‌ ವಿತರಿಸಿ ಮಾತನಾಡಿದರು.

2019-20ನೇ ಸಾಲಿನ ಫಲಾನುಭವಿಗಳಾದ ಗೂಗಲ್ ಗ್ರಾಮದ ರಾಮಯ್ಯ, ನೀಲವಂಜಿಯ ಮಾರುತಿ, ಜಾಗಟಗಲ್‌ನ ವೀರೇಶ, ಹುಲಿಗುಡ್ಡದ ಯಲ್ಲಪ್ಪ, ಕರಡಿಗುಡ್ಡದ ಮಲ್ಲಪ್ಪ, ಕೊತ್ತದೊಡ್ಡಿಯ ಹನುಮಂತ್ರಾಯ, ಗಬ್ಬೂರಿನ ಸಾಯಿಬಣ್ಣ, ಜಾಲಹಳ್ಳಿಯ ಪಾರ್ವತಿ, ಲಿಂಗದಹಳ್ಳಿಯ ಶರಣಮ್ಮ, ಗೋಪಾಳಪುರದ ದೇವಮ್ಮ, ಎಚ್.ಜಾಡಲದಿನ್ನಿಯ ತಾಯಣ್ಣ, ಅನ್ವರದ ಹನುಮಂತ್ರಾಯ ಮತ್ತು 2018-19ನೇ ಸಾಲಿನ ಫಲಾನುಭವಿಗಳಾದ ದೇವದುರ್ಗ ಪಟ್ಟಣದ ಕೆ.ಗುಳ್ಳಪ್ಪ ಮತ್ತು ರಾಮದುರ್ಗದ ದೇವಮ್ಮ ಸೇರಿದಂತೆ ಒಟ್ಟು 14 ರೈತರಿಗೆ ಪಂಪ್‌ಸೆಟ್ ವಿತರಿಸಲಾಯಿತು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಿಂದ್ರಪ್ಪ ಸಾಸ್ವಿಗೇರಾ, ಬಿಜೆಪಿ ಮುಖಂಡರಾದ ನಾಗರಾಜ ಪಾಟೀಲ ಗೋಪಾಳಪುರ, ದೇವಿಂದ್ರಪ್ಪ ಚಿಕ್ಕಬುದೂರು, ರವಿಗೌಡ ಮಾತ್ಪಳ್ಳಿ, ಜಹೀರ್ ಪಾಷಾ, ಶಿವಕುಮಾರ್ ಬಳೆ, ಶಿವಕುಮಾರ ಅಕ್ಕರಕಿ, ಗೋಪಾಲಕೃಷ್ಣ ಮೇಟಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ನಿಗಮದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.