ADVERTISEMENT

ರಾಯಚೂರು: ಪಾಲಿಕೆ ಸದಸ್ಯರಿಂದ ಬಕೆಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:17 IST
Last Updated 10 ಏಪ್ರಿಲ್ 2025, 15:17 IST
ರಾಯಚೂರಿನ  ಜನತಾ ಕಾಲೊನಿಯಲ್ಲಿ ಗುರುವಾರ ಮಹಾನಗರ ಪಾಲಿಕೆ ಸದಸ್ಯ ಜಯಣ್ಣ ಅವರು ಸಾರ್ವಜನಿಕರಿಗೆ ನೀಲಿ ಮತ್ತು ಹಸಿರು ಬಕೆಟ್ ಗಳನ್ನು ವಿತರಿಸಿದರು
ರಾಯಚೂರಿನ  ಜನತಾ ಕಾಲೊನಿಯಲ್ಲಿ ಗುರುವಾರ ಮಹಾನಗರ ಪಾಲಿಕೆ ಸದಸ್ಯ ಜಯಣ್ಣ ಅವರು ಸಾರ್ವಜನಿಕರಿಗೆ ನೀಲಿ ಮತ್ತು ಹಸಿರು ಬಕೆಟ್ ಗಳನ್ನು ವಿತರಿಸಿದರು   

ರಾಯಚೂರು: ನಗರದಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಲು, ಹಸಿ ಹಾಗೂ ಒಣ ಕಸ ಪ್ರತ್ಯೇಕ ಸಂಗ್ರಹ ಅನುಕೂಲಕ್ಕಾಗಿ ವಾರ್ಡ್ ನಂಬರ್ 2ರ ಜನತಾ ಕಾಲೊನಿಯಲ್ಲಿ ಗುರುವಾರ ಮಹಾನಗರ ಪಾಲಿಕೆ ಸದಸ್ಯ ಜಯಣ್ಣ ಅವರು ಸಾರ್ವಜನಿಕರಿಗೆ ನೀಲಿ ಮತ್ತು ಹಸಿರು ಬಕೆಟ್ ಗಳನ್ನು ವಿತರಣೆ ಮಾಡಿದರು.

ನಂತರ ಮಾತನಾಡಿ, ‘ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಕೊಟ್ಟ ಬಕೆಟ್‌ನಲ್ಲಿ ಒಣಕಸ, ಹಸಿ ಕಸವನ್ನು ಬೇರ್ಪಡಿಸಿ ಹಾಕಬೇಕು. ಇದರಿಂದ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.

‘ಮಹಾನಗರ ಪಾಲಿಕೆಯ ಜೊತೆಗೆ ತಾವು ಸಹಕರಿಸಿ ಜನತಾ ಕಾಲೊನಿಯನ್ನು ಸ್ವಚ್ಛ ಕಾಲೊನಿ ಯನ್ನಾಗಿ ಮಾಡುವಲ್ಲಿ ಸಾರ್ವಜನಿಕರು ಸಹಕಾರ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.