ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಲಿಂಗಸುಗೂರು: ದುಡಿದು ಹಣ ತರಲಿಲ್ಲ ಎಂದು ಪತಿಯು, ತನ್ನ ಪತ್ನಿಯನ್ನು ನೇಣು ಹಾಕಿ ಕೊಂದ ಘಟನೆ ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಬಸಮ್ಮ ಸಿದ್ದಲಿಂಗಪ್ಪ ಬನ್ನಿಗೋಳ (28) ಮೃತರು. ಚಿಕ್ಕ ಉಪ್ಪೇರಿಯ ಸಿದ್ದಲಿಂಗಪ್ಪ ಬನ್ನಿಗೋಳ (32) ಎಂಬಾತ ದುಡಿದು ಹಣ ತರುವಂತೆ ನಿತ್ಯ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ.
‘ಶನಿವಾರ ಪತ್ನಿಗೆ ಹಲ್ಲೆ ಮಾಡಿ, ಸೀರೆಯಿಂದ ನೇಣು ಹಾಕಿ ಕೊಲೆಗೈದಿದ್ದಾನೆ’ ಎಂದು ಬಸಮ್ಮಳ ತಾಯಿ ಗುರುಲಿಂಗಮ್ಮ ಜಗ್ಲೇರ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.