ADVERTISEMENT

ರಾಯಚೂರು | ‘ಮೌಢ್ಯ ನಿವಾರಣೆಗೆ ಬದುಕು ಮುಡಿಪು’

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:25 IST
Last Updated 8 ಸೆಪ್ಟೆಂಬರ್ 2025, 6:25 IST
ರಾಯಚೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಸಚಿವ ಎನ್. ಎಸ್. ಬೋಸರಾಜು ಪುಷ್ಪಾರ್ಪಣೆ ಮಾಡಿದರು. ಶಾಸಕ ಶಿವರಾಜ ಪಾಟೀಲ, ನರಸಮ್ಮ ಮಾಡಗಿರಿ, ಸಮಾಜದ ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು
ರಾಯಚೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಸಚಿವ ಎನ್. ಎಸ್. ಬೋಸರಾಜು ಪುಷ್ಪಾರ್ಪಣೆ ಮಾಡಿದರು. ಶಾಸಕ ಶಿವರಾಜ ಪಾಟೀಲ, ನರಸಮ್ಮ ಮಾಡಗಿರಿ, ಸಮಾಜದ ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು   

ರಾಯಚೂರು: ‘ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಮೌಢ್ಯ ಹಾಗೂ ಜಾತಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯಲು ಬ್ರಹ್ಮಶ್ರೀ ನಾರಾಯಣಗುರು ಶ್ರಮಿಸಿದ್ದಾರೆ. ಸಮ ಸಮಾಜ ನಿರ್ಮಾಣಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದರು’ ಎಂದು ಸಚಿವ ಎನ್. ಎಸ್. ಬೋಸರಾಜು ಹೇಳಿದರು.

ನಗರದಲ್ಲಿ ಎಚ್ಎಸ್ಆರ್ ಬಡಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

‘ಸಮೃದ್ಧ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಮಹಾತ್ಮರ ಆದರ್ಶ ಹಾಗೂ ತತ್ವಗಳ ಪಾರಿಪಾಲನೆ ಮಾಡಬೇಕಿದೆ. ಎಂದು ತಿಳಿಸಿದರು.

ADVERTISEMENT

ಸಚಿವ ಎನ್. ಎಸ್. ಬೋಸರಾಜು, ನಗರ ಶಾಸಕ ಡಾ.ಎಸ್ ಶಿವರಾಜ ಪಾಟೀಲ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಮಹಾನಗರಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ ಅವರು ಸಾಮೂಹಿಕವಾಗಿ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಉಪ ಮೇಯರ್ ಸಾಜಿದ್ ಸಮೀರ್, ತಹಶೀಲ್ದಾರ್ ಸುರೇಶ ವರ್ಮ, ಮುಖಂಡರಾದ ಕೆ. ಶಾಂತಪ್ಪ ಕಡಗೋಲ್, ರವಿ ಬೋಸರಾಜ್, ಸಮಾಜದ ಮುಖಂಡರಾದ ನರಸಿಂಹ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ, ಆರ್ಯ ಈಡಿಗ ಸಮಾಜದ ಮುಖಂಡರಾದ ಬಸವರಾಜ್ ಗೌಡ, ರಾಜನ ಗೌಡ, ಅಶೋಕ ಗುತ್ತೇದಾರ್, ಈರಪ್ಪ ಗೌಡ, ಅನಂತರಾಜು ಗೌಡ, ತಾಯನ ಗೌಡ, ಖಾಜನ ಗೌಡ, ರಂಗಲಿಂಗನ ಗೌಡ, ಪರಶುರಾಮ ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಮೇಯರ್ ನರಸಮ್ಮ ಮಾಡಗಿರಿ ಉದ್ಘಾಟಿಸಿದರು.

ಉಡುಪಿಯ ನಿವೃತ್ತ ಉಪನ್ಯಾಸಕ ದಯಾನಂದ ಡಿ. ವಿಶೇಷ ಉಪನ್ಯಾಸ ನೀಡಿದರು.

ತಹಶೀಲ್ದಾರ್ ಸುರೇಶ ವರ್ಮಾ, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಪರಶುರಾಮ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಎನ್. ಶಂಕ್ರಪ್ಪ, ಹರವಿ ನಾಗನಗೌಡ, ಆಂಜನೇಯ ಕಡಗೋಲ್, ನಾಗಿರಡ್ಡಿ, ಶ್ರೀನಿವಾಸ ರೆಡ್ಡಿ, ಶ್ರೀಕಾಂತ್ ವಕೀಲ, ಶ್ರೀನಿವಾಸ್, ಬಸವರಾಜ ಪಾಟೀಲ, ಎಂ.ವಿರೂಪಾಕ್ಷಿ, ಖಾಜನಗೌಡ, ಚನ್ನಪ ನಾಗೋಲಿ, ಪರಶುರಾಮ, ನರಸನಗೌಡ, ಲಚ್ಚನಗೌಡ, ರಾಚನಗೌಡ, ಅಶೋಕಗೌಡ, ಈರಪ್ಪಗೌಡ, ಹನುಮಂತಪ್ಪಗೌಡ, ರಂಗಲಿಂಗನಗೌಡ, ತಾಯನಗೌಡ, ಬಸವರಾಜಗೌಡ ಉಪಸ್ಥಿತರಿದ್ದರು. 

ರಾಯಚೂರಿನ ಪಂಡಿತ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ

ಸಾರೋಟಿನಲ್ಲಿ ಗುರುಗಳ ಭಾವಚಿತ್ರದ ಮೆರವಣಿಗೆ ಹಳದಿ ಬಣ್ಣದ ಶಲ್ಯ ಧರಿಸಿ ಪಾಲ್ಗೊಂಡ ಮುಖಂಡರು ಮೆರವಣಿಗೆಗೆ ಕಳೆ ಕಟ್ಟಿದ ಡೊಳ್ಳುವಾದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.