ADVERTISEMENT

ಗುರುಗುಂಟಾ: ಮಳೆಗೆ ನೆಲಕ್ಕುರುಳಿದ ಮನೆಗಳು

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:10 IST
Last Updated 20 ಮೇ 2025, 14:10 IST
ಹಟ್ಟಿ ಸಮೀಪದ ಗುರುಗುಂಟಾ ಗ್ರಾಮದಲ್ಲಿ ಮನೆ ನೆಲಕ್ಕುರುಳಿರುವುದು
ಹಟ್ಟಿ ಸಮೀಪದ ಗುರುಗುಂಟಾ ಗ್ರಾಮದಲ್ಲಿ ಮನೆ ನೆಲಕ್ಕುರುಳಿರುವುದು   

ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಗ್ರಾಮದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆಗಳು ನೆಲಕ್ಕುರುಳಿವೆ.

ಗುರುಗುಂಟಾ ಗ್ರಾಮದಲ್ಲಿ ಕೆಲ ಮಣ್ಣಿನ ಮನೆಗಳು ಕುಸಿದಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಿಡ-ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಹಳ್ಳಿ, ದೊಡ್ಡಿ-ತಾಂಡಾಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ADVERTISEMENT

ರಾಯದುರ್ಗಾ ಗ್ರಾಮದಲ್ಲಿ ದೇವಮ್ಮ ಹನುಮಂತ ಎನ್ನುವ ಮನೆಗೆ ಹಾಕಿದ ತಗಡಿನ ಟಿನ್‌ಗಳು ಭಾರಿ ಗಾಳಿಗೆ ಹಾರಿ ಹೋಗಿದೆ.

ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ರಭಸದ ಮಳೆಯಿಂದ ಗ್ರಾಮದ ಬಹುತೇಕ ಚರಂಡಿಗಳು ತುಂಬಿ ಹರಿಯುತ್ತಿವೆ.

ಕೆಲ ರಸ್ತೆಗಳಲ್ಲಿ ನೀರು ನಿಂತು ಹೊಂಡದಂತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.