ADVERTISEMENT

ಎಡಬಿಡದ ತುಂತುರು ಮಳೆ: 3.2 ಎಂಎಂ ದಾಖಲು

ದಿನವಿಡೀ ಸೂರ್ಯದರ್ಶನವಿಲ್ಲದೆ ಮನೆಮಾಡಿರುವ ತಂಪು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 14:00 IST
Last Updated 6 ಅಕ್ಟೋಬರ್ 2022, 14:00 IST
ರಾಯಚೂರಿನಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಿದ್ದವು.
ರಾಯಚೂರಿನಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಿದ್ದವು.   

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ದಿನವಿಡೀ ತುಂತುರು ಮಳೆ ಸುರಿದಿದ್ದು, ಮಾಪಕದಲ್ಲಿ 3.2 ಮಿಲಿಮೀಟರ್‌ ದಾಖಲಾಗಿದೆ.

ಆಕಾಶದಲ್ಲಿ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ದಿನವಿಡೀ ಸೂರ್ಯನ ದರ್ಶನವೆ ಆಗಲಿಲ್ಲ. ಎಲ್ಲೆಡೆಯಲ್ಲೂ ತಂಪು ಆವರಿಸಿಕೊಂಡಿದ್ದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಜನಸಂದಣಿ ಕಾಣುತ್ತಿದ್ದ ರಸ್ತೆಗಳು ಮತ್ತು ಮಾರುಕಟ್ಟೆಗಳು ಖಾಲಿಖಾಲಿಯಾಗಿದ್ದವು. ಮಳೆಯಿಂದಾಗಿ ವ್ಯಾಪಾರ ಕೂಡಾ ಎಂದಿನಂತೆ ಇರಲಿಲ್ಲ.

ಚರಂಡಿಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಮಳೆನೀರು ಸಂಗ್ರಹವಾಗಿದ್ದು, ಜನಸಂಚಾರ ಮತ್ತು ವಾಹನಗಳ ಸಂಚಾರವು ಸಂಕಷ್ಟಮಯವಾಗಿದೆ. ಬೀದಿ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ರಾಯಚೂರು ತಾಲ್ಲೂಕಿನ ಬಹಳಷ್ಟು ಗ್ರಾಮೀಣ ಮಾರ್ಗಗಳ ಸ್ಥಿತಿ ಅಧೋಗತಿಯಾಗಿದ್ದು, ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ದೇವಸುಗೂರು ಹೋಬಳಿ, ಯರಗೇರಾ ಹೋಬಳಿಗಳಲ್ಲಿ ತೊಂದರೆ ಉಂಟಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.