ADVERTISEMENT

ರಾಯಚೂರು ಜಿಲ್ಲೆಯಲ್ಲಿ ಸಾಧಾರಣ ಮಳೆ

ಉಮಲೂಟಿಯಲ್ಲಿ 25 ಮಿ.ಮೀ, ಗುಡದೂರಲ್ಲಿ 22 ಮಿ.ಮೀ, ಕಲ್ಮಂಗಿಯಲ್ಲಿ 20.5 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 15:34 IST
Last Updated 15 ಮೇ 2024, 15:34 IST

ರಾಯಚೂರು: ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ಜಾವಾ ಸಾಧಾರಣ ಮಳೆಯಾಗಿದೆ.

ಸಿಂಧನೂರು ತಾಲ್ಲೂಕಿನ ಉಮಲೂಟಿಯಲ್ಲಿ 25 ಮಿ.ಮೀ, ಗುಡದೂರಲ್ಲಿ 22 ಮಿ.ಮೀ, ಕಲ್ಮಂಗಿಯಲ್ಲಿ 20.5 ಮಿ.ಮೀ, ಮಸ್ಕಿ ತಾಲ್ಲೂಕಿನ ಕನ್ನಾಳದಲ್ಲಿ 22 ಮಿ.ಮೀ, ತಲೇಖಾನದಲ್ಲಿ 21 ಮಿ.ಮೀ, ಪೈದೊಡ್ಡಿಯಲ್ಲಿ 22 ಹಾಗೂ ಲಿಂಗಸುಗೂರು ತಾಲ್ಲೂಕಿನ ಗುರಗುಂಟಾದಲ್ಲಿ 20 ಮಿ.ಮೀ ಮಳೆಯಾಗಿದೆ.

ಮಸ್ಕಿ, ಕವಿತಾಳ, ತುರ್ವಿಹಾಳ ಹಾಗೂ ಹಟ್ಟಿದ ಚಿನ್ನದ ಗಣಿ ಪ್ರದೇಶದಲ್ಲೂ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಎರಡು ದಿನ ಸಾಧಾರಣ ಮಳೆಯಾಗುತ್ತಿರುವ ಕಾರಣ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.