ADVERTISEMENT

ಜಿಟಿಜಿಟಿ ಮಳೆ: ರೈತರ ಕಣ್ಣಲ್ಲಿ‌‌ ನೀರು ತರಿಸಿದ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 7:02 IST
Last Updated 16 ಜೂನ್ 2025, 7:02 IST
ಹಟ್ಟಿ ಚಿನ್ನದ ಗಣಿ ಸಮೀಪದ ಗೌಡೂರು ಗ್ರಾಮದಲ್ಲಿ ರೈತರು ಸಂಗ್ರಹಿಸಿಟ್ಟ ಈರುಳ್ಳಿ ಮಳೆಗೆ‌ಕೊಳೆಯುತ್ತಿವೆ.
ಹಟ್ಟಿ ಚಿನ್ನದ ಗಣಿ ಸಮೀಪದ ಗೌಡೂರು ಗ್ರಾಮದಲ್ಲಿ ರೈತರು ಸಂಗ್ರಹಿಸಿಟ್ಟ ಈರುಳ್ಳಿ ಮಳೆಗೆ‌ಕೊಳೆಯುತ್ತಿವೆ.   

ಹಟ್ಟಿ ಚಿನ್ನದ ಗಣಿ: ಜಿಟಿಜಿಟಿ ಮಳೆ ಪರಿಣಾಮ ಹಟ್ಟಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಕೊಳೆಯುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆ‌ಯೂ ಸಧ್ಯ ಉಳ್ಳಾಗಡ್ಡಿಗೆ ಬೆಲೆ ಇಲ್ಲ.

ಅಧಿಕ ಮಳೆಯಿಂದ ಈರುಳ್ಳಿ ಇಳುವರಿ ಕುಸಿತ ಕಂಡಿದೆ. ಬೆಳೆಯಲು ಮಾಡಿದ ಖರ್ಚೂ ಬಾರದ ಸ್ಥಿತಿ ಇದೆ.  ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಒಂದಡೆ ಮಳೆಯಿಂದ ರೈತರು ಈರುಳ್ಳಿಗೆ ಹಾನಿಯಾಗಿದ್ದರೆ ಇನ್ನೊಂಡೆ ಮಜ್ಜಿಗೆ ರೋಗ, ಶಿಲೀಂಧ್ರ ರೋಗ ಬಾಧಿಸಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಉತ್ತಮ ಆದಾಯದ ನಿರೀಕ್ಷೆಗೆ ಪೆಟ್ಟು ಬಿದ್ದಿದೆ ಎಂದು ಗೌಡೂರು ಗ್ರಾಮದ ರೈತ ಬಸವರಾಜ ಅಳಲು ತೋಡಿಕೊಂಡಿದ್ದಾರೆ.

ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿ, ಔಷದಿ ಸಿಂಪಡಣೆ, ಕಳೆ ತೆಗೆಯುವ ಕಾರ್ಯ ಸೇರಿದಂತೆ ಈರುಳ್ಳಿ ಬೆಲೆ ಬೆಳೆಯಲು ಎಕರೆಗೆ ಸುಮಾರು ₹30 ಸಾವಿರ ಖರ್ದಾಗಿದೆ. ಕಸ ಕೀಳಲು ಮತ್ತು ಹಸನಗೊಳಿಸಲು ₹15 ಸಾವಿರ ವೆಚ್ಚ ಮಾಡಿದ್ದೇವೆ. ಖರ್ಚು ಮಾಡಿದಷ್ಟು ಆದಾಯ ಸಿಕ್ಕಿಲ್ಲ. ‌ಸರ್ಕಾರ ರೈತರ ನೆರವಿಗೆ ದಾವಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ADVERTISEMENT

‘ಈರುಳ್ಳಿ ಬೆಲೆ ಈ ವಾರ ಕೆ.ಜಿಗೆ ₹25 ಇಳಿದಿದೆ. ಕ್ವಿಂಟಲ್‌ಗೆ ₹4,885 ಇದ್ದ ದರ ₹3,000ಕ್ಕೆ ಕುಸಿದಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಅಬ್ದಲ್  

ಈರುಳ್ಳಿ ಬೆಳೆದಿರುವ ರೈತರು ಮಳೆಯಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ರೈತರ ನೆರವಿಗೆ ಸರ್ಕಾರ ದಾವಿಸಲಿ

-ತಿಮ್ಮಣ್ಣ ಪೈದೊಡ್ಡಿ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.