ADVERTISEMENT

ಕವಿತಾಳ | ವಿವಿಧೆಡೆ ಬಸವ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:39 IST
Last Updated 30 ಏಪ್ರಿಲ್ 2025, 14:39 IST
ಕವಿತಾಳದ ಬಸವ ವೃತ್ತದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಬಸವಣ್ಣನವರ ನಾಮ ಫಲಕಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು.
ಕವಿತಾಳದ ಬಸವ ವೃತ್ತದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಬಸವಣ್ಣನವರ ನಾಮ ಫಲಕಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು.   

ಕವಿತಾಳ: ಪಟ್ಟಣದ ವಿವಿಧೆಡೆ ಹಾಗೂ ಹಳ್ಳಿಗಳಲ್ಲಿ ಬಸವ ಜಯಂತಿ ಬುಧವಾರ ಆಚರಿಸಲಾಯಿತು. ಇಲ್ಲಿನ ಬಸವ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಬಸವೇಶ್ವರ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶರಣಬಸವ ಹಣಿಗಿ ಮಾತನಾಡಿ, ’ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ, ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ತತ್ವಾದರ್ಶಗಳು ಎಂದಿಗೂ ಪ್ರಸ್ತುತʼ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮೀಪದ ವಟಗಲ್‌ ಗ್ರಾಮ ಪಂಚಾಯಿತಿಯಲ್ಲಿ ಜಯಂತಿ ಆಚರಿಸಲಾಯಿತು.

ADVERTISEMENT

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯಮನಪ್ಪ ದಿನ್ನಿ, ನಿರ್ದೇಶಕ ಚೆನ್ನರಡ್ಡಿ ಭಾವಿಕಟ್ಟಿ, ವೀರಯ್ಯಸ್ವಾಮಿ, ವಿರೂಪಾಕ್ಷಪ್ಪ ಹಾಲ್ವಿ, ಒವಣ್ಣ, ತಿಪ್ಪಯ್ಯಸ್ವಾಮಿ, ರಾಜಶೇಖರ ನಾಡಗೌಡ, ಶಾಂತಯ್ಯಸ್ವಾಮಿ, ದೇವರಾಜ ರೊಟ್ಟಿ, ಮೌನೇಶ ಹಿರೇಕುರಬರ, ಶರಣಪ್ಪ ಪಾಟೀಲ, ಶಿವಕುಮಾರ ಪಾಟೀಲ, ಅರಳಪ್ಪ ತುಪ್ಪದೂರು, ಪಂಪಾಪತಿ, ಮೌನೇಶ ಕೊಡ್ಲಿ, ಈರಣ್ಣ ಕೆಳಗೇರಿ, ಮಹಾದೇವಪ್ಪ ಹಡಪದ, ಪಂಪಾಪತಿ, ರಾಘವೇಂದ್ರ, ಪ್ರಶಾಂತ, ಚಾಂದಪಾಶಾ, ಯಾಕೂಬ ಕಡತಲ್‌ ಮತ್ತಿತರರು ಉಪಸ್ಥಿತರಿದ್ದರು.

ಕವಿತಾಳದ ಬಸವ ವೃತ್ತದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಬಸವಣ್ಣನವರ ನಾಮ ಫಲಕಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.