ADVERTISEMENT

ಲಿಂಗಸುಗೂರು ಪುರಸಭೆ | ಬಾಬುರಡ್ಡಿ ಅಧ್ಯಕ್ಷ, ಶರಣಮ್ಮ ಉಪಾಧ್ಯಕ್ಷೆ

ಚುನಾವಣೆ ಕುತೂಹಲ ಮಧ್ಯೆಯು ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:15 IST
Last Updated 1 ಅಕ್ಟೋಬರ್ 2024, 14:15 IST
ಲಿಂಗಸುಗೂರು ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ ಅವರನ್ನು ಬೆಂಬಲಿತ ಸದಸ್ಯರೊಂದಿಗೆ ಮಂಗಳವಾರ ಸಂಸದ ಜಿ.ಕುಮಾರ ನಾಯಕ ಸನ್ಮಾನಿಸಿದರು
ಲಿಂಗಸುಗೂರು ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ ಅವರನ್ನು ಬೆಂಬಲಿತ ಸದಸ್ಯರೊಂದಿಗೆ ಮಂಗಳವಾರ ಸಂಸದ ಜಿ.ಕುಮಾರ ನಾಯಕ ಸನ್ಮಾನಿಸಿದರು   

ಲಿಂಗಸುಗೂರು: ‘ಸ್ಥಳೀಯ ಪುರಸಭೆ ಅಧ್ಯಕ್ಷರಾಗಿ ಬಾಬುರಡ್ಡಿ ರಾಜಪ್ಪ ಮುನ್ನೂರು, ಉಪಾಧ್ಯಕ್ಷರಾಗಿ ಶರಣಮ್ಮ ಅಮರಪ್ಪ ಕೊಡ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ’ ಎಂದು ಚುನಾವಣಾಧಿಕಾರಿ ಶಂಶಾಲಂ ನಾಗಡದಿನ್ನಿ ತಿಳಿಸಿದರು.

ಮಂಗಳವಾರ ಜರುಗಿದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಬಾಬುರಡ್ಡಿ ರಾಜಪ್ಪ ಮುನ್ನೂರು ಸಲ್ಲಿಸಿದ ನಾಮಪತ್ರಕ್ಕೆ ರುದ್ರಪ್ಪ ಹನುಮಪ್ಪ ಮ್ಯಾಗೇರಿ ಸೂಚಕರಾಗಿ ಮತ್ತು ರವೂಫ್‍ ನೂರುಲ್ಲಾಹಸನ್‍ ಗ್ಯಾರಂಟಿ ಅನುಮೋದಕರಾಗಿ ರುಜು ಹಾಕಿದ ನಾಮಪತ್ರ ಸಲ್ಲಿಸಿದ್ದರು.

ಹಿಂದುಳಿದ ವರ್ಗ (ಅ) ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಶರಣಮ್ಮ ಅಮರಪ್ಪ ಕೊಡ್ಲಿ ನಾಮಪತ್ರಕ್ಕೆ ಎಂ.ಡಿ ರಫಿ ಸೂಚಕರಾಗಿ, ಶಿವರಾಯ ದೇಗುಲಮಡಿ ಅನುಮೋದಕರಾಗಿ ರುಜು ಹಾಕಿದ್ದ ನಾಮಪತ್ರ ಸಲ್ಲಿಸಿದ್ದರು. ತಲಾ ಒಂದು ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

23 ಸದಸ್ಯರ ಪೈಕಿ 13 ಸದಸ್ಯರ ಜೊತೆಗೆ ಸಂಸದ ಜಿ.ಕುಮಾರ ನಾಯಕ ಹಾಜರಾಗಿದ್ದರು. ಶಾಸಕ ಮಾನಪ್ಪ ವಜ್ಜಲ, ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಸೇರಿದಂತೆ 10 ಜನ ಪುರಸಭೆ ಸದಸ್ಯರು ಸಭೆಗೆ ಗೈರು ಹಾಜರಾಗಿರುವುದನ್ನು ಚುನಾವಣಾ ಸಿಬ್ಬಂದಿ ದೃಢಪಡಿಸಿದ್ದಾರೆ.

ಕುತೂಹಲ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಘೋಷಣೆ ಮತ್ತು ಚುನಾವಣಾ ದಿನಾಂಕ ಘೋಷಣೆ ಆದಾಗಿನಿಂದಲು ಕಾಂಗ್ರೆಸ್‍ ಪಕ್ಷದ ಹೂಲಗೇರಿ ಮತ್ತು ಬಯ್ಯಾಪುರ ಬಣಗಳ ಒಳ ಜಗಳದಿಂದ ದಿನಕ್ಕೊಂದು, ಕ್ಷಣಕ್ಕೊಂದು ವದಂತಿಗಳು ಹರದಾಡಿ ಚುನಾವಣೆ ಕುತೂಹಲ ಮೂಡಿಸಿತ್ತು.

ಅಭಿವೃದ‍್ದಿಗೆ ಆದ್ಯತೆ: ನೂತನ ಅಧ್ಯಕ್ಷ ಬಾಬುರಡ್ಡಿ ಮುನ್ನೂರು ಮಾತನಾಡಿ, ‘ಸಂಸದ ಜಿ. ಕುಮಾರ ನಾಯಕ ಮತ್ತು ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಸಾರಥ್ಯದಲ್ಲಿ ಕಾಂಗ್ರೆಸ್‍ ಸದಸ್ಯರ ಬೆಂಬಲ ತಮ್ಮ ಅವಿರೋಧ ಆಯ್ಕೆಗೆ ಸಹಕಾರಿ ಆಗಿದೆ. ಸರ್ವ ಸದಸ್ಯರ ಸಲಹೆ ಪಡೆದು ಅಭಿವೃದ‍್ಧಿಗೆ ಆದ್ಯತೆ ನೀಡುವೆ’ ಎಂದು ಭರವಸೆ ನೀಡಿದರು.

ಸಂಸದ ಜಿ. ಕುಮಾರ ನಾಯಕ, ಮಂಜುಳಾ ಶರಣಪ್ಪ, ರುದ್ರಪ್ಪ ಬ್ಯಾಗಿ, ಶಾಂತಮ್ಮ ಶಿವಪ್ಪ, ಶಿವರಾಯ ದೇಗಲಮಡಿ, ಎಂ.ಡಿ ರಫಿ, ಶಶಿಕಲಾ ರಾಜಪ್ಪ ಮುನ್ನೂರು, ದೊಡ್ಡನಗೌಡ ಹೊಸಮನಿ, ರವೂಫ್‍ ಗ್ಯಾರಂಟಿ, ಬಾಬುರಡ್ಡಿ ಮುನ್ನೂರು, ಶರಣಮ್ಮ ಅಮರಪ್ಪ, ಶರಣಪ್ಪ ಕೆಂಗಾರಿ, ರಾಜೇಶ್ವರಿ ಪ್ರಭಯ್ಯ, ಕುಪ್ಪಮ್ಮ ಯತಗಲ್‍ ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.