ಸಿಂಧನೂರು: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಿಂಬದಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಚಾಲಕರಿಗೆ ಗಂಭೀರ ಗಾಯಗಳಾಗಿವೆ.
ಸೋಮವಾರ ಬೆಳಿಗ್ಗೆ ದೊಡ್ಡಪ್ಪ ಹನುಮಂತಪ್ಪ ಮಟ್ಟೂರು ಅವರು ತಮ್ಮ ಪುತ್ರ ಪ್ರಕಾಶ ಜೊತೆಗೆ ಹೊಗರನಾಳ ಗ್ರಾಮದಿಂದ ಸಿಂಧನೂರು ನಗರಕ್ಕೆ ಬೈಕ್‍ನಲ್ಲಿ ಬರುತ್ತಿದ್ದರು. ಶರಣಪ್ಪ ರಂಗಪ್ಪ ನಾಯಕ ಎನ್ನುವ ವ್ಯಕ್ತಿ ಸಿಂಧನೂರಿನಿಂದ ತಮ್ಮ ಗ್ರಾಮವಾದ ಏಳುಮೈಲ್ ಕ್ಯಾಂಪಿಗೆ ಬೈಕ್‍ನಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ನಗರದ ಕುಷ್ಟಗಿ ರಸ್ತೆಯಲ್ಲಿರುವ ಅಗ್ನಿಶಾಮಕ ದಳದ ಕಚೇರಿಯ ಬಳಿ ಎರಡು ಬೈಕ್‍ಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಈ ದುರ್ಘಟನೆಯಿಂದ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ದೊಡ್ಡಪ್ಪ ಹನುಮಂತಪ್ಪ ಮಟ್ಟೂರು (67) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‍ಗಳ ಚಾಲಕರಾದ ಪ್ರಕಾಶ (35) ಮತ್ತು ಶರಣಪ್ಪ (30) ಅವರಿಗೂ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.