
ಮುದಗಲ್: ಪುರಸಭೆ, ಕಂದಾಯ ಭವನ, ಸಮುದಾಯ ಆರೋಗ್ಯ ಕೇಂದ್ರ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ವಸತಿ ನಿಲಯ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಪುರಸಭೆಯಲ್ಲಿ ಮುಖ್ಯಾಧಿಕಾರಿ ಪ್ರವೀಣ ಬೋಗಾರ, ಕಂದಾಯ ಭವನದಲ್ಲಿ ಉಪ ತಹಶೀಲ್ದಾರ್ ತುಳಜಾರಾಮ್ ಸಿಂಗ್, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ಡಾ.ಅನಂತ ಕುಮಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಸಿದ್ಧರಾಮ್ ಪಾಟೀಲ, ಕೃಷಿ ಮಾರುಕಟ್ಟೆಯಲ್ಲಿ ಮೌನೇಶ, ರೈತ ಸಂಪರ್ಕ ಕೇಂದ್ರದಲ್ಲಿ ಶ್ರೀಶೈಲ ಭೋವಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ಪುರಸಭೆ ಆವರಣದಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಗೀತೆ ಹಾಡಿಗೆ ನೃತ್ಯ ಮಾಡಿದರು.
ಪುರಸಭೆ ವ್ಯವಸ್ಥಾಪಕ ಸುರೇಶ ಹೊನ್ನಳ್ಳಿ, ದಳಪತಿ ರಾಜಣ್ಣ, ಎಸ್.ಕೆ.ಅಜ್ಮೀರ್ ಬೆಳಿಕಟ್ಟ್, ಗುಂಡಪ್ಪ ಗಂಗಾವತಿ, ಶೇಖ್ ರಸೂಲ್, ದುರಗಪ್ಪ ಕಟ್ಟಿಮನಿ, ಮಹಿಬೂಬ್ ಕಡ್ಡಿಪುಡಿ, ಹಸನ್ ಅಲಿ, ಸೈಯದ್ ಸಾಬ್ ಹಳೇಪೇಟೆ, ಬಸವರಾಜ ಬಂಕದಮನಿ, ಖದೀರ್ ಪಾನವಾಲೆ, ಶ್ರೀನಿವಾಸ ಶೆಟ್ಟಿ, ಸಾದಿಕ್ ಅಲಿ ಹಾಗೂ ನಾಗರಾಜ ತಳವಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.