ADVERTISEMENT

ಅಂಗವಿಕಲರ ಮಾಸಾಶನ ಹೆಚ್ಚಿಸುವಂತೆ ರಾಯಚೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 12:25 IST
Last Updated 7 ಜುಲೈ 2020, 12:25 IST

ರಾಯಚೂರು: ಲಾಕ್‌ಡೌನ್‌ನಿಂದಾಗಿ ಅಂಗವಿಕಲರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಮಾಸಾಶನವನ್ನು ₹5ಸಾವಿರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಘೋಷಿಸಿದ ಮೂರು ತಿಂಗಳ ಮಾಶಾಸನದಲ್ಲಿ ಹೆಚ್ಚುವರಿಯಾಗಿ ₹1,000 ಸಹಾಯ ಘೋಷಿಸಿದರೂ‌ ಫಲಾನುಭವಿಗಳಿಗೆ ತಲುಪಿಲ್ಲ. ಇಂದಿರಾಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆಯ ಶೇ 80 ರಷ್ಟು ವಿಕಲತೆ ಹೊಂದಿರಬೇಕು. ಅನೇಕರು ಶೇ 7.6 ಇದ್ದಾರೆ. ಅನೇಕರು ಅಸಂಘಟಿತ ವರ್ಗದಲ್ಲಿದ್ದು ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಸಂಪಾದನೆ ಶೂನ್ಯವಾಗಿದೆ.

ADVERTISEMENT

ಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸದಲ್ಲಿ ಅಂಗವಿಕಲರನ್ನು ತೊಡಗಿಸಲು ವಿಶೇಷ ಗಮನ ನೀಡಬೇಕು. ನಗರಗಳಿಗೂ ವಿಸ್ತರಿಸಿ 200 ದಿನಗಳು ಕೆಲಸ ನೀಡಬೇಕು ಹಾಗೂ ವಿಕಲಚೇತನರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಹೊನ್ನಪ್ಪ, ಪದಾಧಿಕಾರಿ ಕರಿಯಪ್ಪ, ಕೃಷ್ಣ ಅಸ್ಕಿಹಾಳ್, ರಾಜು, ವೀನೊದ್, ಈರೇಶ್, ಸಂತೋಷಿಮಾ, ಅಬ್ದುಲ್ ಖಾಜ ಮೋಹಿನುದ್ದಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.