ADVERTISEMENT

ನೋಟ್ಸ್‌ ಮಾಡಿದ್ದು ನೆರವಿಗೆ ಬಂತು: ಪ್ರತಿಭಾವಂತ ವಿದ್ಯಾರ್ಥಿಯ ಮನದ ಮಾತು

ಸೈನ್ಸ್ ಟಾಪರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:39 IST
Last Updated 17 ಜುಲೈ 2020, 13:39 IST
ಭಾನುಶ್ರೀ ಸಿ.
ಭಾನುಶ್ರೀ ಸಿ.   

ರಾಯಚೂರು:ಕಠಿಣ ಪರಿಶ್ರಮದಿಂದ ಓದುವ ಜೊತೆಗೆಸ್ಮಾರ್ಟ್ ಆಗಿ ಓದುವುದನ್ನು ಕಲಿತುಕೊಳ್ಳಬೇಕು. ಓದುವಾಗ ಸಣ್ಣದಾಗಿ ನೋಟ್ಸ್ ಮಾಡಿಟ್ಟುಕೊಳ್ಳುವುದು ನನ್ನ ಅಭ್ಯಾಸ. ಬರೆದುಕೊಂಡಿದ್ದನ್ನು ನೋಡಿದರೆ ಇಡೀ ಓದಿಕೊಂಡಿದ್ದೆಲ್ಲವೂ ನೆನಪಿಗೆ ಬರುತ್ತಿತ್ತು. ನನ್ನ ಸಹೋದರಿ ಭೂಮಿಶ್ರೀ ನನ್ನೊಂದಿಗೆ ವಿಜ್ಞಾನ ಓದುತ್ತಿದ್ದರಿಂದ ಇಬ್ಬರು ಚರ್ಚೆ ಮಾಡುತ್ತಿದ್ದೇವು. ನನಗಿಂತಲೂ ಒಂದು ಅಂಕ ಮಾತ್ರ ಕಡಿಮೆ ಬಂದಿದೆ ಅವಳಿಗೆ ಎನ್ನುತ್ತಾರೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಭಾನುಶ್ರೀ ಸಿ.

ಸಿಂಧನೂರಿನ ಎವಿಎಸ್‌ ಬ್ರಿಲಿಯಂಟ್ ಪಿಯು ಕಾಲೇಜಿನ ಭಾನುಶ್ರೀ, ತಮ್ಮ ಸಾಧನೆಗೆ ತಂದೆ ವೆಂಕಟೇಶ ಮತ್ತು ತಾಯಿ ಲೀಲಾವತಿ ಅವರ ಪ್ರೋತ್ಸಾಹವನ್ನು ನೆನೆಯುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇ 97ರಷ್ಟು (582) ಅಂಕಗಳನ್ನು ಪಡೆದಿದ್ದಾರೆ.

ಕಾಲೇಜಿನಲ್ಲಿ ಹೇಳಿದ ಪಾಠಕ್ಕೆ ಸಂಬಂಧಿಸಿದ ಕೆಲಸವನ್ನೆಲ್ಲ ಅವತ್ತೆ ಮಾಡಿ ಮುಗಿಸುತ್ತಿದ್ದೇವು. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಓದುವ ರೂಢಿ ಇತ್ತು. ಪರೀಕ್ಷೆಗಳು ಸಮೀಪಿಸಿದಂತೆ ಇನ್ನೂ ಹೆಚ್ಚು ಓದಿಕೊಂಡಿದ್ದು ಅನುಕೂಲವಾಯಿತು. ದಿನಕ್ಕೆ ಕನಿಷ್ಠ 12 ರಿಂದ 14 ಗಂಟೆಗಳನ್ನು ಓದಿನಲ್ಲಿ ಕಳೆಯುತ್ತಿದ್ದೇವು ಎಂದು ಅವರು ವಿವರಿಸಿದರು.

ADVERTISEMENT

ಮೊಬೈಲ್‌ನಲ್ಲಿ ಬೇಡವಾದದ್ದನ್ನು ನೋಡುತ್ತಾ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ವಿಡಿಯೋ ಹುಡುಕಿ ನೋಡುತ್ತಿದ್ದೇವು. ಏನಾದರೂ ಗೊಂದಲಗಳಿದ್ದರೆ ಉಪನ್ಯಾಸಕರಿಗೆ ಫೋನ್ ಮಾಡಿ ಕೇಳುತ್ತಿದ್ದೇವು. ಕಾಲೇಜಿನಲ್ಲಿ ಉಪನ್ಯಾಸಕರು, ಆಡಳಿತ ಮಂಡಳಿಯವರು ನಿರಂತರವಾಗಿ ಎಲ್ಲ ವಿದ್ಯಾರ್ಥಿಗಳ ಓದಿನ ಬಗ್ಗೆ ವಿಚಾರಿಸುತ್ತಿದ್ದರು. ಮನೆಯಲ್ಲಿ ಪಾಲಕರು ಕೂಡಾ ಸಹಕಾರ ನೀಡುವುದರೊಂದಿಗೆ ಮಾರ್ಗದರ್ಶನ ಮಾಡಿದ್ದಾರೆ. ಕಾಲೇಜಿನಲ್ಲಿ ಎಲ್ಲರ ಮಧ್ಯೆಯೂ ಸ್ಪರ್ಧಾತ್ಮಕ ಮನೋಭಾವ ಬೆಳೆದಿತ್ತು ಎಂದರು.

ಸಿಇಟಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಲು ತಯಾರಿ ಮಾಡುತ್ತಿದ್ದೇನೆ. ವೈದ್ಯಕೀಯ ಕಲಿಯಲು ಆಸಕ್ತಿ ಇದೆ. ಸರ್ಕಾರಿ ಕೋಟಾದಲ್ಲಿ ಸೀಟು ದೊರಕಿಸಿಕೊಳ್ಳಬೇಕು ಎನ್ನುವ ಪ್ರಯತ್ನ ನನ್ನದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.