ಸಿರವಾರ: ‘ಇಂದಿನ ಸಮಾಜದಲ್ಲಿ ಮಹಿಳೆಯು ಪುರುಷರಿಗೆ ಸಮಾನವಾಗಿ ದುಡಿಯುವ ಜೊತೆಗೆ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಶಿವಶರಣೆ ಅಕ್ಕಮಹಾದೇವಿ ಹಾಕಿಕೊಟ್ಟ ಸನ್ಮಾರ್ಗ ಮತ್ತು ಹೋರಾಟದ ಶಕ್ತಿಯೇ ಕಾರಣ’ ಎಂದು ಅಕ್ಕನ ಬಳಗದ ಎಂ.ಎನ್.ಅಕ್ಕಮಹಾದೇವಿ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ತೊಟ್ಟಿಲೋತ್ಸವದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಮಾತನಾಡಿ, ‘ಶರಣೆ ಅಕ್ಕಮಹಾದೇವಿ ತಮ್ಮ ಹರಿತವಾದ ವಚನಗಳ ಮೂಲಕ ಮಹಿಳಾ ಸಮಾಜಕ್ಕೆ ಆದರ್ಶವಾಗಿದ್ದಾರೆ’ ಎಂದರು.
ಸುವರ್ಣಮ್ಮ ಚುಕ್ಕಿ, ಕವಿತಾ ದೇವೇಂದ್ರ ಸ್ವಾಮಿ, ಶಿವಲೀಲಾ ಅಚ್ಚಾ, ರಾಜೇಶ್ವರಿ ಜೇಗರಕಲ್, ಭಾರತಿ, ಸಿದ್ದಮ್ಮ ಕುಂಬಾರ, ಬೋದಮ್ಮ ಕುಂಬಾರ, ವಿದ್ಯಾಶ್ರೀ ಬೆಳವಿನೂರು, ಸೌಮ್ಯಾ ಸಜ್ಜನ್, ಲತಾ ಗುರುನಾಥ, ರೇಣುಕಾ ನಂದರಡ್ಡಿ, ಕಸ್ತೂರಿ ಸೇರಿದಂತೆ ಅಕ್ಕನ ಬಳಗದ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.