ADVERTISEMENT

ಕೀಟನಾಶಕ ಔಷಧ ಮಾರಾಟ ಮಳಿಗೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 10:50 IST
Last Updated 5 ಅಕ್ಟೋಬರ್ 2021, 10:50 IST
ಕವಿತಾಳದ ಕ್ರಿಮಿನಾಶಕ ಔಷಧ ಮಾರಾಟ ಮಳಿಗೆಗೆ ಸೋಮವಾರ ಕೃಷಿ ಇಲಾಖೆ ಅಧಿಕಾರಿ ವಿ.ಅಂಬಿಕಾ ಭೇಟಿ ನೀಡಿ, ಪರಿಶೀಲಿಸಿದರು
ಕವಿತಾಳದ ಕ್ರಿಮಿನಾಶಕ ಔಷಧ ಮಾರಾಟ ಮಳಿಗೆಗೆ ಸೋಮವಾರ ಕೃಷಿ ಇಲಾಖೆ ಅಧಿಕಾರಿ ವಿ.ಅಂಬಿಕಾ ಭೇಟಿ ನೀಡಿ, ಪರಿಶೀಲಿಸಿದರು   

ಕವಿತಾಳ: ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಅಂಬಿಕಾ ಅವರು ಇಲ್ಲಿನ ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷಧ ಮಾರಾಟ ಮಾಡುವ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

‘ಈ ಭಾಗದಲ್ಲಿ ತೊಗರಿ, ಭತ್ತ ಮತ್ತು ಹತ್ತಿ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗಿದ್ದು ಈ ಬೆಳೆಗಳಲ್ಲಿ ಕೀಟ ಮತ್ತು ರೋಗ ಬಾಧೆ ಕಂಡು ಬರುತ್ತಿದೆ. ಹೀಗಾಗಿ ರೈತರು ಉತ್ತಮ ಗುಣಮಟ್ಟದ ಕ್ರಿಮಿನಾಶಕ ಔಷಧಗಳನ್ನು ಖರೀದಿಸಿ ಸಿಂಪಡಿಸಬೇಕು. ರೈತರು ತಾವು ಖರೀದಿಸಿದ ಕ್ರಿಮಿನಾಶಕಗಳಿಗೆ ತಪ್ಪದೆ ರಸೀದಿ ಪಡೆಯಬೇಕು’ ಎಂದು ಹೇಳಿದರು.

ಮಾರಾಟ ಮಳಿಗೆಗಳಲ್ಲಿ ಅವಧಿ ಮೀರಿದ ಮತ್ತು ಬಯೋ ಕೀಟನಾಶಕ ಮತ್ತಿತರ ಅನಧಿಕೃತ ಕೀಟನಾಶಕಗನ್ನು ಮಾರಾಟ ಮಾಡಲಾಗುತ್ತಿದಿಯೇ ಎನ್ನುವುದನ್ನು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಸಿಬ್ಬಂದಿ ಚಾಂದ್ ಪಾಶಾ ಮುಲ್ಲಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.