ADVERTISEMENT

ರಾಯಚೂರು: ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:09 IST
Last Updated 6 ಫೆಬ್ರುವರಿ 2023, 7:09 IST
ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದಲ್ಲಿ ಸಿದ್ಧರಾಮೇಶ್ವರ 71ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ನಡೆಯಿತು
ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದಲ್ಲಿ ಸಿದ್ಧರಾಮೇಶ್ವರ 71ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ನಡೆಯಿತು   

ರಾಯಚೂರು: ತಾಲ್ಲೂಕಿನ ಗಧಾರ ಗ್ರಾಮದಲ್ಲಿ ನಿಜಗುರು ದತ್ತಾತ್ರೇಯ ಸಾಂಪ್ರದಾಯಕರಾದ ಸಿದ್ಧರಾಮೇಶ್ವರರ 71ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ದೇವಸ್ಥಾನದ ಮುಖ್ಯ ಅರ್ಚಕ ವೀರಭದ್ರಯ್ಯ ಸ್ವಾಮಿ ಅವರು, ವಿಶೇಷವಾಗಿ ಪೂಜಾ ನೆರವೇರಿಸಿದರು. ವೀರಭದ್ರ ಅಚಾರ್ಯ ಸ್ವಾಮೀಜಿ ಸಾವಿರ ದೇವರ ಸಂಸ್ಥಾನ ಮಠ ಬಿಚ್ಚಾಲಿ, ಮಟಮಾರಿ ಶಂಭುಲಿಂಗ ಸ್ವಾಮೀಜಿ ಕಲ್ಲೂರು ಅವರು ಉಪನ್ಯಾಸ ನೀಡಿದರು.

ಗಂಗಾ ಬಾಂಬೆ ಅವರ ಆಶೀರ್ವಾದದಿಂದ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ ನೆರವೇರಿಸಲಾಯಿತು. ಸಂಜೆ 4ಕ್ಕೆ ಪಲ್ಲಕ್ಕಿ, ನಂದಿಕೋಲು ಸೇವೆ ಮತ್ತು ಕಳಸಾರೋಹಣ ಮತ್ತು ರಥೋತ್ಸವ, ಪ್ರಸಾದ ವಿತರಣೆ ನಡೆಯಿತು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವಿಶೇಷ ಪೂಜೆ ಸಲ್ಲಿಸಿದರು. ಭಜನಾ ಕಾರ್ಯಕ್ರಮ ನಡೆಯಿತು. ಗಧಾರ ಗ್ರಾ.ಪಂ ಸದಸ್ಯರು, ಕಮಲಾಪುರ ಪಂಚಾಯಿತಿ ಅಧ್ಯಕ್ಷರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.