ಲಿಂಗಸುಗೂರು : ತಾಲ್ಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಸಿದ್ಧಿವೀರಾಂಜನೇಯ ಮೂರ್ತಿಯನ್ನ ದುಷ್ಕರ್ಮಿಗಳು ಹೊಡೆದು ಹಾಳು ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಚೆನ್ನಬಸವ ಮಹಾಸ್ವಾಮಿ ವಿಭೂತಿಮಠ ಆಶ್ರಮದಲ್ಲಿ ಕಳೆದ ಆರು ತಿಂಗಳ ಹಿಂದೆ ಪ್ರತಿಷ್ಠಾಪಿಸಿದ್ದ ಸಿದ್ದಿ ವೀರಾಂಜನೇಯ ಮೂರ್ತಿಯನ್ನು ಬೆಳಗಿನ ಜಾವ ದ್ವಂಸಗೊಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್, ಹಟ್ಟಿ ಪಿಐ ಹೊಸಕೇರಪ್ಪ ,ಪಿಎಸ್ಐ ಮಾದಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.