ADVERTISEMENT

ಸಿಂಧನೂರು | ಪಡಿತರ ವಿತರಣೆಯಲ್ಲಿ ವಿಳಂಬ: ಆರೋಪ

ಮಿನಿವಿಧಾನಸೌಧ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:19 IST
Last Updated 13 ಜುಲೈ 2024, 16:19 IST
ಸಿಂಧನೂರಿನ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಸಮಿತಿ ಪ‍ದಾಧಿಕಾರಿಗಳು ಶನಿವಾರ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಸಮಿತಿ ಪ‍ದಾಧಿಕಾರಿಗಳು ಶನಿವಾರ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ತಾಲ್ಲೂಕಿನ ತಿಮ್ಮಾಪುರ ಸೇರಿದಂತೆ ವಿವಿಧ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡದೆ ವಿಳಂಬ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಸಮಿತಿ ಶನಿವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

ಬಳಿಕ ಈ ಸಂಬಂಧ  ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರಗೆ ಮನವಿ ಪತ್ರ ಸಲ್ಲಿಸಿತು.

‘ಸರ್ಕಾರವು ಬಡವರ ಹಸಿವುಜ ನೀಗಿಸಲು ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಜೋಳ ಹಾಗೂ ಇತರೆ ಆಹಾರ ಪದಾರ್ಥಗಳ ವಿತರಿಸುತ್ತಿದೆ. ಆದರೆ, ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡದೆ ಜನರಿಗೆ ವಂಚಿಸಲಾಗಿದ. ಪಡಿತರ ವಿತರಕರು ಆಹಾರ ಪದಾರ್ಥಗಳನ್ನು ಕಾಳ ಸಂತೆಯಲ್ಲಿ ಮಾರುತ್ತಿದ್ದಾರೆ. ಈ ವಿಷಯ ಗೊತ್ತಿದ್ದರೂ ಆಹಾರ ನಿರೀಕ್ಷಕರು ಕಣ್ಣುಮುಚ್ಚಿ ಕುಳಿತಿದ್ದಾರೆ’ ಎಂದು ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ ಮೌನೇಶ ಜಾಲವಾಡಿಗಿ ಆರೋಪಿಸಿದರು.

ADVERTISEMENT

‘ಗ್ರಾಮದ ಜನರಿಗೆ ಕೂಡಲೇ ಪಡಿತರ ವಿತರಣೆ ಮಾಡಬೇಕು. ತಾಲ್ಲೂಕಿನಲ್ಲಿ ಎಲ್ಲ ಗ್ರಾಮದಲ್ಲಿ ಪ್ರತಿ ತಿಂಗಳು ಸರಿಯಾಗಿ ಪಡಿತರ ವಿತರಣೆಗೆ ಕ್ರಮವಹಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ಎಂ.ಗಂಗಾಧರ, ಹುಸೇನಪ್ಪ ತಿಮ್ಮಾಪುರ, ವಿರೂಪಾಕ್ಷಿ ಸಾಸಲಮರಿ, ರಾಜು ನಾಯಕ್, ಮುದುಕಪ್ಪ ಸೀಕಲ್, ರಾಮಯ್ಯ ಉರ್ಲಗಡ್ಡಿ, ಮಾರೆಯ್ಯ ಉರ್ಲಗಡ್ಡಿ, ಸಣ್ಣ ಮುನಿಯಪ್ಪ, ದೇವಪ್ಪ, ಸಣ್ಣ ಅಯ್ಯಪ್ಪ, ವೆಂಕಣ್ಣ ಅಯ್ಯಪ್ಪ, ಸಾಬಯ್ಯ, ಶಂಕರಪ್ಪ, ವೆಂಕಟೇಶ, ದೇವರಾಜ, ನಾಗಪ್ಪ, ಲಕ್ಷ್ಮಿ, ಅಯ್ಯಮ್ಮ, ಮೌನಮ್ಮ, ತಾಯಮ್ಮ, ಶರಣಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.