ADVERTISEMENT

ಅನಾರೋಗ್ಯಪೀಡಿತ ಹಸುವಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:28 IST
Last Updated 15 ಫೆಬ್ರುವರಿ 2020, 14:28 IST
ವಾಸವಿ ನಗರ ಮಾರ್ಗದ ಪಕ್ಕದಲ್ಲಿ ಅನಾರೋಗ್ಯದಿಂದ ಮಲಗಿದ್ದ ಹಸುವನ್ನು ಟ್ರ್ಯಾಕ್ಟ್‌ರ್‌ ಮೂಲಕ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುವುದಕ್ಕೆ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಶನಿವಾರ ವ್ಯವಸ್ಥೆ ಮಾಡಿದರು
ವಾಸವಿ ನಗರ ಮಾರ್ಗದ ಪಕ್ಕದಲ್ಲಿ ಅನಾರೋಗ್ಯದಿಂದ ಮಲಗಿದ್ದ ಹಸುವನ್ನು ಟ್ರ್ಯಾಕ್ಟ್‌ರ್‌ ಮೂಲಕ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುವುದಕ್ಕೆ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಶನಿವಾರ ವ್ಯವಸ್ಥೆ ಮಾಡಿದರು   

ರಾಯಚೂರು: ನಗರದ ನೇತಾಜಿ ನಗರ ಠಾಣೆ ವ್ಯಾಪ್ತಿಯ ವಾಸವಿನಗರ ಮಾರ್ಗದಬದಿಯಲ್ಲಿ ಸುಮಾರು ಎಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತ ಮಲಗಿದ್ದ ಹಸುವನ್ನು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಚಿಕಿತ್ಸೆ ಕೊಡಿಸಿದ್ದಾರೆ.

ಗ್ರೀನ್ ರಾಯಚೂರು ಸಂಸ್ಥೆಯು ಈ ಬಗ್ಗೆ ವ್ಯಾಟ್ಸ್‌ಅ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದನ್ನು ಗಮನಿಸಿದ ತಕ್ಷಣ ಸ್ಪಂದಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು, ಪಶುವೈದ್ಯರನ್ನು, ನೇತಾಜಿನಗರ ಠಾಣೆಯ ಸಿಬ್ಬಂದಿ ಹಾಗೂ ಗ್ರೀನ್ ರಾಯಚೂರು ತಂಡವನ್ನು ಕರೆಯಿಸಿಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಸಾರ್ವಜನಿಕರ ಸಹಕಾರದಿಂದ ಹಸುವನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಲಾಯಿತು. ಹಸುವಿಗೆ ಚಿಕಿತ್ಸೆಯನ್ನು ನೀಡಿದ ನಂತರ ಅದನ್ನು ಗೋಶಾಲೆಗೆ ಬಿಡುವಂತೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.