ADVERTISEMENT

ವಿಶೇಷ 23 ಸಖಿ ಮತಗಟ್ಟೆಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:21 IST
Last Updated 22 ಏಪ್ರಿಲ್ 2019, 14:21 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ರಾಯಚೂರು: ಲೋಕಸಭಾ ಚುನಾವಣೆಗೆ ರಾಯಚೂರು ಕ್ಷೇತ್ರದ ವ್ಯಾಪ್ತಿಯಲ್ಲಿ 23 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಯಚೂರು ಗ್ರಾಮೀಣದಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿಕಟ್ಟಡ ಮತ್ತು ಯರಗೇರಾ ಜಿಎಚ್‍ಎಸ್ ನೂತನ ಕಟ್ಟಡದ 2 ಮತಗಟ್ಟೆಗಳು, ರಾಯಚೂರು ನಗರದಲ್ಲಿ ಜಿಲ್ಲಾ ಪಂಚಾಯಿತಿ, ರಾಜ್‌ ಎಂಜಿನಿಯರಿಂಗ್‌ ಸಬ್‌ ಸೆಕ್ಷನ್‌ ಗಂಜ ಏರಿಯಾದಲ್ಲಿನ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ, ಎಪಿಎಂಸಿ ಆಡಳಿತ ಭವನ, ಆರ್‌ಡಿಸಿಸಿ ಬ್ಯಾಂಕ್, ಪಿಡಬ್ಲ್ಯೂಡಿ ಅಸಿಸ್ಟಂಟ್‌ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ, ಬೆಸ್ತವಾರ ಪೆಟೆಯ ಕರ್ನಾಟಕ ಬ್ಯಾಂಕ್, ವಿಜಯಬ್ಯಾಂಕ್ ಒಟ್ಟು 8 ಸಖಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.

ಮಾನ್ವಿಯ ಎಪಿಎಂಸಿಯ ರೈತ ಭವನ ಹಾಗೂ ರಾಜೀವ್‌ ಗಾಂಧಿ ಜಿಮ್ ಸೆಂಟರ್ ಮತಗಟ್ಟೆಗಳು, ದೇವದುರ್ಗದ ಸರ್ಕಾರಿ ಪ್ರಾಥಮಿಕ ಶಾಲೆ ಮ್ಯಾದರಗೊಳ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲದಕಲ್ ಮತಗಟ್ಟೆಗಳು ಹಾಗೂ ಲಿಂಗಸೂಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಟ್ಟಿ ಟಿಎಂಸಿ ಕಚೇರಿಯ ಈಸ್ಟ್ ವಿಂಗ್ ಚಾವಣಿ ಮತ್ತು ಮುದಗಲ್‌ ನಾಡ ಕಾರ್ಯಾಲಯದಲ್ಲಿ ಸಖಿ ಮತಗಟ್ಟೆಗಳಿವೆ.

ADVERTISEMENT

ಸುರಪುರದ ಆನಂದ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಎರಡು ಮತಗಟ್ಟೆಗಳು, ಶಹಾಪೂರದ ವಿದ್ಯಾನಗರದ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೊಸ ಕಟ್ಟಡ ಉರ್ದು ಶಾಲೆಯ ಮತಗಟ್ಟೆಗಳು. ಯಾದಗಿರಿಯಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಸ್ಲಿಂಪುರ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕೋಲಿವಾಡದಲ್ಲಿನ ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.