ADVERTISEMENT

ಪೂರಕ ಪರೀಕ್ಷೆ: ಆರು ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 11:05 IST
Last Updated 21 ಸೆಪ್ಟೆಂಬರ್ 2020, 11:05 IST
ಪಟ್ಟಣದ ಶರಣಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಗಣಿತ ಪೂರಕ ಪರೀಕ್ಷೆ ಬರೆದರು
ಪಟ್ಟಣದ ಶರಣಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಗಣಿತ ಪೂರಕ ಪರೀಕ್ಷೆ ಬರೆದರು   

ಹಟ್ಟಿ ಚಿನ್ನದಗಣಿ: ಸೋಮವಾರ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪೂರಕ ಪರೀಕ್ಷೆ ನಡೆಯಿತು.

‘ಪಟ್ಟಣದ ಶರಣಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪರೀಕ್ಷೆ ನಡೆಯಿತು. 133 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 127 ಜನ ಪರೀಕ್ಷೆ ಬರೆದರು. 6 ವಿದ್ಯಾರ್ಥಿಗಳು ಗೈರಾಗಿದ್ದರು’ ಎಂದು ಪರೀಕ್ಷಾ ಮೇಲ್ವಿಚಾರಕ ಬಸನಗೌಡ ಮಾಹಿತಿ ನೀಡಿದರು.

ಹಟ್ಟಿ ವ್ಯಾಪ್ತಿಯ ಗೆಜ್ಜಲಗಟ್ಟಾ, ಯಲಗಟ್ಟಾ, ಮಾಚನೂರು ಹಾಗೂ ಗುರುಗುಂಟಾ ಗ್ರಾಮಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮಾಸ್ಕ್‌ ವಿತರಣೆ ಮಾಡಲಾಯಿತು. ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಯಿತು.

ADVERTISEMENT

ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.