ADVERTISEMENT

ರಾಯಚೂರು: ಕೋಟೆ ಕಟ್ಟಡ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:29 IST
Last Updated 23 ಸೆಪ್ಟೆಂಬರ್ 2020, 3:29 IST
ರಾಯಚೂರು ನಗರದ ಐತಿಹಾಸಿಕ ಕೋಟೆ ಕಟ್ಟಡ ಕುಸಿತವಾಗಿರುವುದು
ರಾಯಚೂರು ನಗರದ ಐತಿಹಾಸಿಕ ಕೋಟೆ ಕಟ್ಟಡ ಕುಸಿತವಾಗಿರುವುದು   

ರಾಯಚೂರು: ಈಚೆಗೆ ಸುರಿದ ಮಳೆಯಿಂದಾಗಿ ನಗರದ ಪಂಚಬೀಬಿ ಪಹಡದ ಐತಿಹಾಸಿಕ ಕೋಟೆ ಕಟ್ಟಡ ಕುಸಿದಿದೆ.

ನಗರದ ಕೇಂದ್ರಬಿಂದುವಾಗಿದ್ದ ಈ ಕೋಟೆ ಕಟ್ಟಡವು ಕೇಂದ್ರ ಬಸ್ ನಿಲ್ದಾಣ ಸಮೀಪದ ಬೆಟ್ಟದ ಮೇಲಿದೆ.

ಕಮಾನ್ ಮತ್ತು ಆಶ್ರಯ ಖಾನಾ ಶಿಥಿಲಗೊಂಡಿದ್ದವು. ಮಳೆಗೆ ನೆನೆದ ಪರಿಣಾಮ ಕೋಟೆ ಮುಂಭಾಗದ ಒಂದು ಬದಿಯ ಗೋಡೆ ಕುಸಿದಿದೆ. ಕಟ್ಟಡ ಸಾಕಷ್ಟು ಹಳೆಯದಾಗಿದ್ದು, ಉಳಿದ ಭಾಗ ಕೂಡ ಕುಸಿಯುವ ಭೀತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.