ADVERTISEMENT

ಮುದಗಲ್: ಪಂಚಮಸಾಲಿ ಸಂಘಕ್ಕೆ ಆಯ್ಕೆ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ಮೇ 2025, 12:32 IST
Last Updated 25 ಮೇ 2025, 12:32 IST
ಮುದಗಲ್ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ವೀರಶೈವ ಸಮಾಜದ ಮುಖಂಡರು ಸನ್ಮಾನಿಸಿದರು
ಮುದಗಲ್ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ವೀರಶೈವ ಸಮಾಜದ ಮುಖಂಡರು ಸನ್ಮಾನಿಸಿದರು   

ಮುದಗಲ್: ಇಲ್ಲಿನ ಮಹಾಂತೇಶ ಪಾಟೀಲ ಅವರು ಪಂಚಮಸಾಲಿ ಸಮಾಜ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಪಟ್ಟಣದ ವಿವಿಧೆಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ವೀರಶೈವ ಸಮಾಜದವರು, ಪತ್ರಿಕಾ ಭವನದಲ್ಲಿ ಮುದಗಲ್ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡರಾದ ಸುರೇಂದ್ರಗೌಡ ಪಾಟೀಲ ಆದಾಪುರ, ಸಿದ್ದಯ್ಯ ಸ್ವಾಮಿ ಸಾಲಿಮಠ, ಶಿವಾನಂದ ಸುಂಕದ, ಲಿಂಗಪ್ಪ ಹಣಗಿ, ಮಲ್ಲಣ್ಣ ಮಾಟೂರು, ಈರಪ್ಪ ಗೂಡೂರು, ಮಲ್ಲಪ್ಪ ಹೂಗಾರ, ಶರಣಪ್ಪ ಸಜ್ಜನ್, ಸಂಗಪ್ಪ ಕೊಡೆಕಲ್, ವಿರುಪಾಕ್ಷಯ್ಯ ವಸ್ತ್ರದ, ಶರಣಪ್ಪ ಕುಂಬಾರ, ಪಂಪಣ್ಣ ಕುಂಬಾರ, ಗಂಗಾಧರ ಮಡಿವಾಳ, ಶರಣಪ್ಪ ಬಳಿಗಾರ, ರಾಘವೇಂದ್ರ ಗುಮಾಸ್ತೆ, ಚಂದ್ರಶೇಖರ ಗಂಗಾವತಿ, ದೇವಣ್ಣ ಕೋಡಿಹಾಳ, ಶಶಿಧರ ಕಂಚಿಮಠ, ಶಿವರಾಜ ಸುಂಕದ, ಬಸವರಾಜ ಆಶಿಹಾಳ, ಬಸವರಾಜ ಹೂನೂರು ಹಾಗೂ ಸುರೇಶ ಪತ್ತಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.