ಶಕ್ತಿನಗರ: ಗಂಗಾವತಿಯಲ್ಲಿ ಈಚೆಗೆ ನಡೆದ 7ನೇ ರಾಜ್ಯ ಮಟ್ಟದ ಪೆಂಕಾಕ್ ಸಿಲಾಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಚೂರು ಪೆಂಕಾಕ್ ಸಿಲಟ್ ಅಸೋಸಿಯೇಶನ್‌ನ ಸ್ಪರ್ಧಿಗಳು 4 ಚಿನ್ನ , 6 ಬೆಳ್ಳಿ ಮತ್ತು 8 ಕಂಚು ಪದಕ ಪಡೆದುಕೊಂಡು ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಕಾವ್ಯಾಂಜಲಿ, ಮೇಘನಾ ಬಾಮನ್, ಖಾಜಿ ತುಬಾ ಅನಂ, ಬಿ.ಮಣಿಕಂಠ, ಎ.ಡಿಂಪಲ್ ಸಾಯಿ ಮೈತ್ರಿ ಅವರು ಚಿನ್ನದ ಪದಕ ಪಡೆದಿದ್ದಾರೆ. ಅರುಣಕುಮಾರ, ಬಸವರಾಜ, ಗೌರಮ್ಮ, ಕೀರ್ತಿ, ಕೆ.ಕಾವ್ಯಾಂಜಲಿ, ಎ.ಡಿಂಪಲ್ ಸಾಯಿಮೈತ್ರಿ ಅವರು ಬೆಳ್ಳಿ ಪದಕ ಪಡೆದಿದ್ದಾರೆ.
ಬಿ.ಕಾರ್ತೀಕ್, ಗೌರಮ್ಮ, ಕೀರ್ತಿ, ಆದಿಸ್ಕಂದ, ಮಾನಸಬಾಮನ್, ಬಿ.ಮಣಿಕಂಠ, ಕಾವ್ಯಾಂಜಲಿ ಅವರು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವಿಜೇತರಾದ ಸ್ಪರ್ಧಿಗಳು ನಾಸಿಕ್‌ನಲ್ಲಿ ಮತ್ತು ಹರಿಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಇವರಿಗೆ
ರಾಜ್ಯದ ಪೆಂಕಾಕ್ ಸಿಲಾಟ್‌ನ ತೀರ್ಪುಗಾರ ಕೆ.ಲಕ್ಷ್ಮೀ ಅವರು ತರಬೇತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.