ADVERTISEMENT

ಮಾಲೀಕನಿಗೆ ರಾಡ್‌ನಿಂದ ಒಡೆದು ಚಿನ್ನಾಭರಣ ಕದ್ದೊಯ್ದ ಕಳ್ಳ

ಮುದಗಲ್‌ನ ಮೇಗಳಪೇಟೆ ಬಡಾವಣೆಯಲ್ಲಿ ಹಾಡಹಗಲೇ ಘಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 14:18 IST
Last Updated 2 ಆಗಸ್ಟ್ 2024, 14:18 IST
ಕಳ್ಳನಿಂದ ಹಲ್ಲೆಗೆ ಒಳಗಾದ ನೀಲಪ್ಪ ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಳ್ಳನಿಂದ ಹಲ್ಲೆಗೆ ಒಳಗಾದ ನೀಲಪ್ಪ ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ   

ಮುದಗಲ್: ಪಟ್ಟಣದ ಮೇಗಳಪೇಟೆ ಬಡಾವಣೆಯ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿರುವ ಕಳ್ಳನೊಬ್ಬ, ಮನೆಯಲ್ಲೇ ಇದ್ದ ಮಾಲೀಕನ ತಲೆಗೆ ಕಬ್ಬಿಣದ ರಾಡಿನಿಂದ ಒಡೆದು ಬಂಗಾರ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ನೀಲಪ್ಪ ಗದ್ದೆಪ್ಪ ಹುಣಸಗಿಡ ಹಲ್ಲೆಗೆ ಒಳಗಾದವರು. ಮನೆ ಒಳ ಹೊಕ್ಕ ಕಳ್ಳನನ್ನು ನೀಲಪ್ಪ ಪ್ರಶ್ನಿಸಿದ್ದಾರೆ. ಈ ವೇಳೆ  ವೇಳೆ ಕಳ್ಳ ಕಬ್ಬಿಣದ ರಾಡಿನಿಂದ ನಿಂಗಪ್ಪ ಅವರ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡಿರುವ ನಿಂಗಪ್ಪ ಅವರು ಇಲ್ಲಿನ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡಾವಣೆಯಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಿತು.

ADVERTISEMENT

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಹರೀಶ ಭೇಟಿ ನೀಡಿ ಮಾಹಿತಿ ಪಡೆದರು. ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ಬಾಲಚಂದ್ರ ಲಕಂ, ಮುದಗಲ್ ಪಿಎಸ್ಐ ವೆಂಕಟೇಶ ಮಾಡಿಗೇರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಮುದಗಲ್ ಪಟ್ಟಣದ ಮೇಗಳಪೇಟೆ ಬಡಾವಣೆಯಲ್ಲಿ ಕಳ್ಳತನವಾದ ಮನೆಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಹರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.